ಒಪ್ಪಂದ ಅನುಮೋದಿಸಿದರೆ ರಾಜೀನಾಮೆ: ಇಸ್ರೇಲ್ನ ಭದ್ರತಾ ಸಚಿವರ ಎಚ್ಚರಿಕೆ

ಬೆಂಜಮಿನ್ ನೆತನ್ಯಾಹು | PC : NDTV
ಜೆರುಸಲೇಂ : ಗಾಝಾದಲ್ಲಿ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಿದರೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರಕ್ಕೆ ರಾಜೀನಾಮೆ ನೀಡುವುದಾಗಿ ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ಗ್ವಿರ್ ಎಚ್ಚರಿಕೆ ನೀಡಿದ್ದಾರೆ.
ಗಾಝಾ ಕದನ ವಿರಾಮವನ್ನು ಬಲವಾಗಿ ವಿರೋಧಿಸುತ್ತಿರುವ ಬೆನ್ಗ್ವಿರ್ `ಇದೊಂದು ಬೇಜವಾಬ್ದಾರಿ ಒಪ್ಪಂದವಾಗಿದೆ' ಎಂದು ಟೀಕಿಸಿದ್ದಾರೆ. ನೂರಾರು ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರನ್ನು ಬಿಡುಗಡೆಗೊಳಿಸುವ ಮತ್ತು ಗಾಝಾದಲ್ಲಿನ ಆಯಕಟ್ಟಿನ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಯುದ್ಧದ ಸಾಧನೆಗಳನ್ನು ಅಳಿಸಿ ಹಾಕುತ್ತದೆ. ಈ ಬೇಜವಾಬ್ದಾರಿ ಒಪ್ಪಂದ ಅನುಮೋದನೆಗೊಂಡು ಅನುಷ್ಟಾನಗೊಂಡರೆ, ನಾವು ಯೆಹೂದಿ ಶಕ್ತಿಯ ಸದಸ್ಯರು ರಾಜೀನಾಮೆ ಪತ್ರವನ್ನು ಪ್ರಧಾನಿಗೆ ರವಾನಿಸುತ್ತೇವೆ ಎಂದವರು ಹೇಳಿದ್ದಾರೆ. ಆದರೆ ಸರಕಾರವನ್ನು ಉರುಳಿಸುವ ಇರಾದೆ ತಮಗಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.
Next Story





