ಇಸ್ರೇಲ್ ಸೇನಾ ಮುಖ್ಯಸ್ಥರಾಗಿ ಮೇ|ಜ| ಇಯಾಲ್ ಜಾಮಿರ್ ನೇಮಕ

ಇಯಾಲ್ ಜಾಮಿರ್ | PC : NDTV
ಜೆರುಸಲೇಂ: ಇಸ್ರೇಲ್ ನ ಸಶಸ್ತ್ರ ಪಡೆಗಳ ನೂತನ ಮುಖ್ಯಸ್ಥರನ್ನಾಗಿ ನಿವೃತ್ತ ಮೇಜರ್ ಜನರಲ್ ಇಯಾಲ್ ಜಾಮಿರ್ರನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇಮಕಗೊಳಿಸಿದ್ದಾರೆ.
2023ರ ಅಕ್ಟೋಬರ್ ನಲ್ಲಿ ಇಸ್ರೇಲ್ ನ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ತಡೆಯುವಲ್ಲಿನ ವೈಫಲ್ಯದ ಹೊಣೆಯನ್ನು ಹೊತ್ತು ಕಳೆದ ತಿಂಗಳು ಸೇನಾ ಮುಖ್ಯಸ್ಥನ ಹುದ್ದೆಗೆ ಲೆ|ಜ| ಹೆರ್ಝಿ ಹಲೆವಿ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ಇಯಾಲ್ ಜಾಮಿರ್ರನ್ನು ನೇಮಿಸಲಾಗಿದ್ದು ಪ್ರಧಾನಿ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಟ್ಸ್ ಇದನ್ನು ಅನುಮೋದಿಸಿದ್ದಾರೆ ಎಂದು ನೆತನ್ಯಾಹು ಅವರ ಕಚೇರಿಯ ಹೇಳಿಕೆ ತಿಳಿಸಿದೆ.
59 ವರ್ಷದ ಜಾಮಿರ್ 2023ರಿಂದ ರಕ್ಷಣಾ ಸಚಿವಾಲಯದ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Next Story





