ಇಸ್ರೇಲ್ | ಕ್ಷಿಪಣಿ ದಾಳಿಯಲ್ಲಿ 58 ಮಂದಿಗೆ ಗಾಯ

Photo Credit : aljazeera.com
ಟೆಲ್ಅವೀವ್, ಮಾ.13: ಜೆರುಸಲೇಂನ ಉತ್ತರದಲ್ಲಿ, ಲೆಬನಾನ್ ಗಡಿಯ ಸನಿಹದಲ್ಲಿರುವ ಜಾರ್ಜಿರ್ ನಗರದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಸುಮಾರು 58 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಹಲವು ಕಾರುಗಳು ಹಾನಿಗೊಂಡಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ. ದಾಳಿ ನಡೆದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ತುರ್ತು ಸೇವಾ ತಂಡವನ್ನು ನಿಯೋಜಿಸಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.
ಉತ್ತರ ಇಸ್ರೇಲ್ ಮತ್ತು ದಕ್ಷಿಣ ಲೆಬನಾನ್ನಲ್ಲಿರುವ ಇಸ್ರೇಲಿ ಪಡೆಗಳನ್ನು ಕ್ಷಿಪಣಿ ದಾಳಿ ನಡೆಸಿರುವುದಾಗಿ ಶುಕ್ರವಾರ ಹಿಜ್ಬುಲ್ಲಾ ಹೇಳಿತ್ತು.
Next Story




