ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್ನ ಪ್ರದೇಶವನ್ನು ವಶಪಡಿಸಿಕೊಳ್ಳಲಿದೆ: ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್

ಇಸ್ರೇಲ್ ಕಾಟ್ಜ್ | Photo Credit : AP , PTI
ಟೆಲ್ಅವೀವ್: ರಕ್ಷಣಾತ್ಮಕ ವಲಯ(ಬಫರ್ ಝೋನ್)ವನ್ನು ರಚಿಸಲು ಇಸ್ರೇಲ್ ದಕ್ಷಿಣ ಲೆಬನಾನ್ನ ಲಿಟಾನಿ ನದಿಯವರೆಗಿನ ಪ್ರದೇಶವನ್ನು ವಶಪಡಿಸಿಕೊಳ್ಳಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ ಹೇಳಿದ್ದಾರೆ.
ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ʼಇಸ್ರೇಲಿ ಪಡೆಗಳು ಲಿಟಾನಿವರೆಗಿನ ಸೇತುವೆಗಳು ಮತ್ತು ಭದ್ರತಾ ವಲಯವನ್ನು ನಿಯಂತ್ರಿಸಲಿವೆ' ಎಂದರು. ಲಿಟಾನಿ ನದಿ ಇಸ್ರೇಲ್ ಗಡಿಯಿಂದ ಉತ್ತರಕ್ಕೆ ಸುಮಾರು 30 ಕಿ.ಮೀ ದೂರದಲ್ಲಿ ಮೆಡಿಟರೇನಿಯನ್ ಅನ್ನು ಸಂಧಿಸುತ್ತದೆ.
ಇಂತಹ ಕ್ರಮಗಳು ಲೆಬನಾನ್ ರಾಷ್ಟ್ರಕ್ಕೆ ಅಸ್ತಿತ್ವದ ಬೆದರಿಕೆಯಾಗಿದೆ ಎಂದು ಲೆಬನಾನ್ನ ಸಶಸ್ತ್ರ ಹೋರಾಟಗಾರರ ಗುಂಪು ಹಿಜ್ಬುಲ್ಲಾ ಖಂಡಿಸಿದ್ದು ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್ ಅನ್ನು ಆಕ್ರಮಿಸುವುದನ್ನು ತಡೆಯಲು ಹೋರಾಡುವುದಾಗಿ ಘೋಷಿಸಿದೆ.
Next Story





