ಇಸ್ರೇಲ್| ಇರಾನ್ ಕ್ಷಿಪಣಿ ದಾಳಿಯಲ್ಲಿ 6 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ | X/@jurgen_nauditt
ಜೆರುಸಲೇಂ, ಮಾ.26: ಗುರುವಾರ ಇರಾನ್ನ ಕ್ಷಿಪಣಿ ದಾಳಿಯಲ್ಲಿ ಮಧ್ಯ ಇಸ್ರೇಲ್ನಲ್ಲಿ ಕನಿಷ್ಠ 6 ಮಂದಿ ಗಾಯಗೊಂಡಿದ್ದು ಅಲ್ಪ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಗುರುವಾರ ಇಸ್ರೇಲ್ ಭೂಪ್ರದೇಶದ ಕಡೆಗೆ ಧಾವಿಸಿ ಬರುತ್ತಿದ್ದ ಹಲವು ಕ್ಷಿಪಣಿಗಳನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆ ಗಮನಿಸಿವೆ. ಬೆದರಿಕೆಯನ್ನು ತಡೆಯಲು ರಕ್ಷಣಾತ್ಮಕ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದ್ದು 6 ಕ್ಷಿಪಣಿಗಳನ್ನು ತುಂಡರಿಸಲಾಗಿದೆ. ಕ್ಲಸ್ಟರ್ ಬಾಂಬ್ಗಳಿಂದಾಗಿ ಕಾಫರ್ ಕಸ್ಸೆಮ್ ನಗರದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಜೆರುಸಲೆಮ್ ಮತ್ತು ಆಕ್ರಮಿತ ಪಶ್ಚಿಮದಂಡೆಯಲ್ಲಿನ ಇಸ್ರೇಲಿ ವಸಾಹತುಗಳನ್ನು ಒಳಗೊಂಡಂತೆ ಮಧ್ಯ ಇಸ್ರೇಲ್ನಾದ್ಯಂತ ವಾಯುದಾಳಿ ಸೈರನ್ ಮೊಳಗಿದೆ. ಟೆಲ್ ಅವೀವ್ನಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Next Story




