ಗಾಝಾ ನಗರವನ್ನು ವಶಪಡಿಸಿಕೊಳ್ಳುವ ಯೋಜನೆಗೆ ಇಸ್ರೇಲ್ ಅನುಮೋದನೆ

Photo credit: PTI
ಜೆರುಸಲೇಂ: ಗಾಝಾ ನಗರವನ್ನು ವಶಪಡಿಸಿಕೊಳ್ಳುವ ಯೋಜನೆಗೆ ಇಸ್ರೇಲ್ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿರುವ ಬಗ್ಗೆ ವರದಿಯಾಗಿದೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಅವರು ಗಾಝಾ ನಗರದಲ್ಲಿ ಮುಂದಿನ ಹಂತದ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಮತ್ತು ಗಾಝಾ ನಗರವನ್ನು ವಶಪಡಿಸಿಕೊಳ್ಳುವ ಮಿಲಿಟರಿ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದು ಸಚಿವಾಲಯ ದೃಢಪಡಿಸಿದೆ. ರಕ್ಷಣಾ ಸಚಿವಾಲಯದ ವಕ್ತಾರರು ಕೂಡ ಈ ಕುರಿತ ಇಸ್ರೇಲ್ ಮಾಧ್ಯಮಗಳ ವರದಿಗಳನ್ನು ದೃಢಪಡಿಸಿದ್ದಾರೆ.
ಕದನ ವಿರಾಮದ ಇತ್ತೀಚಿನ ಪ್ರಸ್ತಾಪದ ಕುರಿತು ಮಧ್ಯವರ್ತಿಗಳು ಇಸ್ರೇಲ್ನ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ. ಗಾಝಾದಲ್ಲಿ ಒತ್ತೆಯಾಳುಗಳಾಗಿರುವ ಇಸ್ರೇಲ್ ನಾಗರಿಕರ ಸಂಬಂಧಿಕರು ಇಸ್ರೇಲ್ ಸರಕಾರದ ಈ ನಡೆಯನ್ನು ಖಂಡಿಸಿದ್ದಾರೆ. ಹಮಾಸ್ ಅನುಮೋದಿಸಿದ ಕದನ ವಿರಾಮ ಪ್ರಸ್ತಾಪವನ್ನು ಸರಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
Next Story





