ಇಸ್ರೇಲ್ ನಿಂದ ಇರಾನ್ ನ ಮಿನಾಬ್ ಬಾಲಕಿಯರ ಶಾಲೆಯ ಮೇಲೆ ದಾಳಿ; ಮೃತರ ಸಂಖ್ಯೆ 108ಕ್ಕೆ ಏರಿಕೆ

Photo Credit : aljazeera.com
ಮಿನಾಬ್ (ಇರಾನ್): ಇರಾನಿನ ಮಿನಾಬ್ ನಗರದ ಶಾಜರೆಹ್ ತಯ್ಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಮಿನಾಬ್ ಪ್ರಾಸಿಕ್ಯೂಟರ್ ಕಚೇರಿಯನ್ನು ಉಲ್ಲೇಖಿಸಿ ಮಿಝಾನ್ ಸುದ್ದಿ ಸಂಸ್ಥೆ ಈ ಮಾಹಿತಿ ಪ್ರಕಟಿಸಿದೆ. ದಾಳಿಯಿಂದ ಶಾಲಾ ಕಟ್ಟಡವು ಭಾರೀ ಹಾನಿಗೊಳಗಾಗಿದ್ದು, ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಇರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಯನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಘಟನೆ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ ಎಂದು ತಿಳಿದು ಬಂದಿದೆ.
Next Story




