ಇರಾನ್ ಮೇಲೆ ಇಸ್ರೇಲ್ ನಿಂದ ದಾಳಿ; ಟೆಹ್ರಾನ್, ತಬ್ರಿಝ್, ಇಸ್ಫಹಾನ್ ನಲ್ಲಿ ಸ್ಫೋಟ

Photo credit : aljazeera
ಟೆಹ್ರಾನ್, ಜೂ. 8: ಪಶ್ಚಿಮ ಮತ್ತು ಮಧ್ಯ ಇರಾನ್ ನಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಇಸ್ರೇಲಿ ಸೇನೆ ತಿಳಿಸಿದೆ. ಇದರ ಬೆನ್ನಲ್ಲೇ ಟೆಹ್ರಾನ್, ತಬ್ರಝ್ ಮತ್ತು ಇಸ್ಫಹಾನ್ ನಗರಗಳಲ್ಲಿ ಪ್ರಬಲ ಸ್ಫೋಟಗಳು ಸಂಭವಿಸಿರುವುದಾಗಿ ಇರಾನ್ ನ ಮಾಧ್ಯಮಗಳು ವರದಿ ಮಾಡಿವೆ ಎಂದು Aljazeera ವರದಿ ಮಾಡಿದೆ.
ಇರಾನ್ ನ ಅಧಿಕೃತ IRNA ಸುದ್ದಿ ಸಂಸ್ಥೆಯ ಪ್ರಕಾರ, ರಾಜಧಾನಿ ಟೆಹ್ರಾನ್ ನಲ್ಲಿ ಕನಿಷ್ಠ ಎರಡು ಪ್ರಬಲ ಸ್ಫೋಟಗಳು ಕೇಳಿಬಂದಿವೆ. ಇಸ್ಫಹಾನ್ ನಗರದಲ್ಲಿಯೂ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿವೆ. ಸ್ಫೋಟಗಳಿಂದ ಉಂಟಾದ ಹಾನಿ ಮತ್ತು ಸಾವುನೋವುಗಳ ಕುರಿತು ತಕ್ಷಣದ ಮಾಹಿತಿ ಲಭ್ಯವಾಗಿಲ್ಲ.
ಇರಾನ್ನ ಸರ್ಕಾರಿ ಸುದ್ದಿ ಸಂಸ್ಥೆ IRIB , ಟೆಹ್ರಾನ್, ತಬ್ರಿಝ್ ಹಾಗೂ ಇಸ್ಫಹಾನ್ ನಲ್ಲಿ ಬಹು ಸ್ಫೋಟಗಳು ಕೇಳಿಬಂದಿರುವುದಾಗಿ ವರದಿ ಮಾಡಿದೆ.
Next Story




