ಲೆಬನಾನ್ ಮೇಲೆ ಇಸ್ರೇಲ್ ದಾಳಿ | ಕದನ ವಿರಾಮ ಉಲ್ಲಂಘನೆ; ಮಾತುಕತೆಗಳು ಅರ್ಥಹೀನ: ಇರಾನ್ ಅಧ್ಯಕ್ಷ

ಮಸೌದ್ ಪೆಜೆಶ್ಕಿಯಾನ್ | Photo Credit : PTI , AP
ಟೆಹರಾನ್/ಬೈರೂತ್: ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಕದನ ವಿರಾಮ ಒಪ್ಪಂದದ ಉಲ್ಲಂಘನೆಯಾಗಿದ್ದು, ಇದರಿಂದ ನಡೆಯುತ್ತಿರುವ ಮಾತುಕತೆಗಳು ಅರ್ಥಹೀನವಾಗುತ್ತಿವೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದರು.
ಗುರುವಾರ ಪ್ರತಿಕ್ರಿಯಿಸಿದ ಅವರು, ಇಸ್ರೇಲ್ ನ ನಿರಂತರ ದಾಳಿಗಳು ಪ್ರಾದೇಶಿಕ ಶಾಂತಿಗೆ ಧಕ್ಕೆ ತರುತ್ತಿವೆ ಎಂದು ಟೀಕಿಸಿದರು. ಲೆಬನಾನ್ ಜನರನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಇರಾನ್ ಕೈಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹೆಜ್ಬೊಲ್ಲಾ ಜೊತೆಗಿನ ಸಂಘರ್ಷ ಕಳೆದ ತಿಂಗಳು ಮತ್ತೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಇಸ್ರೇಲ್ ಲೆಬನಾನ್ ಮೇಲೆ ತನ್ನ ದಾಳಿಗಳನ್ನು ಹೆಚ್ಚಿಸಿದೆ. ಬುಧವಾರ ನಡೆದ ಭೀಕರ ದಾಳಿಗಳಲ್ಲಿ 250 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಕದನ ವಿರಾಮದ ಭವಿಷ್ಯ ಕುರಿತು ಅನಿಶ್ಚಿತತೆ ಮುಂದುವರಿದಿದೆ.
Next Story




