ಗಾಝಾ ಸಂಘರ್ಷದಿಂದ ಜಾಗತಿಕ ಆರ್ಥಿಕತೆಗೆ ಹಿನ್ನಡೆ: ವಿಶ್ವಬ್ಯಾಂಕ್ ಎಚ್ಚರಿಕೆ

ಅಜಯ್ ಬಾಂಗ Photo Credits: PTI
ನ್ಯೂಯಾರ್ಕ್: ಇಸ್ರೇಲ್- ಹಮಾಸ್ ಯುದ್ಧವು ಜಾಗತಿಕ ಆರ್ಥಿಕತೆ ಮತ್ತು ಅದರ ಅಭಿವೃದ್ಧಿಗೆ ಗಂಭೀರ ಹೊಡೆತವಾಗಿದೆ. ಜಗತ್ತು ಅತ್ಯಂತ ಅಪಾಯಕಾರಿ ಘಟ್ಟದಲ್ಲಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ಎಚ್ಚರಿಸಿದ್ದಾರೆ.
ಸೌದಿ ಅರೆಬಿಯಾದಲ್ಲಿ ಹೂಡಿಕೆದಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ‘ ಜಗತ್ತಿನಲ್ಲಿ ಮತ್ತು ಭೌಗೋಳಿಕ ರಾಜಕೀಯದಲ್ಲಿ ಹಲವು ಬೆಳವಣಿಗೆಗಳಾಗಿವೆ. ಇತ್ತೀಚೆಗೆ ಇಸ್ರೇಲ್ ಮತ್ತು ಗಾಝಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಜಗತ್ತು ಆತಂಕದಿಂದ ಗಮನಿಸುತ್ತಿದೆ. ಇವೆಲ್ಲವನ್ನೂ ಒಟ್ಟಿಗಿರಿಸಿ ನೋಡಿದರೆ, ಆರ್ಥಿಕ ಅಭಿವೃದ್ಧಿಯ ಮೇಲಿನ ಪರಿಣಾಮ ಇನ್ನಷ್ಟು ಗಂಭೀರವಾಗಿದೆ. ನಾವೀಗ ಅತ್ಯಂತ ಅಪಾಯಕಾರಿ ಘಟ್ಟದಲ್ಲಿದ್ದೇವೆ’ ಎಂದರು.
ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಜಾಗತಿಕ ಆರ್ಥಿಕತೆಗೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ. ಆರ್ಥಿಕ ಅಪಾಯಗಳು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಇದನ್ನು ನಿರ್ಲಕ್ಷಿಸಲಾಗದು ಎಂದು ಅಜಯ್ ಬಾಂಗಾ ಎಚ್ಚರಿಕೆ ನೀಡಿದ್ದಾರೆ.
Next Story





