ಕದನ ವಿರಾಮ ಒಪ್ಪಂದ | 45 ಫೆಲೆಸ್ತೀನಿಯರ ಮೃತದೇಹಗಳನ್ನು ಹಸ್ತಾಂತರಿಸಿದ ಇಸ್ರೇಲ್

Screengrab : Al Jazeera
ಖಾನ್ಯೂನಿಸ್,ಅ.15: ಇಸ್ರೇಲ್ ಬುಧವಾರ 45 ಮಂದಿ ಫೆಲೆಸ್ತೀನಿಯರ ಮೃತದೇಹಗಳನ್ನು ಹಸ್ತಾಂತರಿಸಿದ್ದು, ಇದರೊಂದಿಗೆ ಕದನವಿರಾಮ ಒಪ್ಪಂದದಡಿ ಅದು ಹಮಾಸ್ಗೆ ಹಸ್ತಾಂತರಿಸಿದ ಫೆಲೆಸ್ತೀನಿಯರ ಮೃತದೇಹಗಳ ಒಟ್ಟು ಸಂಖ್ಯೆ 90ಕ್ಕೇರಿದೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಆದರೆ ಮೃತಪಟ್ಟವರು ಇಸ್ರೇಲ್ನ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರ ಅಥವಾ ಹಮಾಸ್ನ ವಶದಲ್ಲಿದ್ದ ಒತ್ತೆಯಾಳುಗಳಿಗಾಗಿ ಗಾಝಾದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ಇಸ್ರೇಲ್ ಪಡೆಗಳು ವಶಪಡಿಸಿಕೊಂಡವರದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟ ಕದನ ವಿರಾಮ ಒಪ್ಪಂದದ ಪ್ರಕಾರ ಹಮಾಸ್ ಹಿಂತಿರುಗಿಸುವ ಪ್ರತಿಯೊಂದು ಒತ್ತೆಯಾಳುವಿನ ಮೃತದೇಹಕ್ಕೆ ಪ್ರತಿಯಾಗಿ ಇಸ್ರೇಲ್ 15 ಫೆಲೆಸ್ತೀನಿಯರ ಮೃತದೇಹಗಳನ್ನು ಹಸ್ತಾಂತರಿಸಬೇಕಿದೆ. ಸೋಮವಾರ ಇಸ್ರೇಲ್ 2 ಸಾವಿರ ಫೆಲೆಸ್ತೀನ್ ಕೈದಿಗಳನ್ನು ಸೋಮವಾರ ಬಿಡುಗಡೆಗೊಳಿಸಿತ್ತು.
Next Story





