ಜಾಗತಿಕ ಒತ್ತಡಕ್ಕೆ ಇಸ್ರೇಲ್ ಮಣಿದಿದೆ : ಐಡಿಎಫ್ ಮಾಜಿ ವಕ್ತಾರ ಜೊನಾಥನ್

PC | X
ಟೆಲ್ ಅವೀವ್, ಜು.28: ತೀವ್ರ ಜಾಗತಿಕ ಒತ್ತಡಕ್ಕೆ ಮಣಿದು ಗಾಝಾದಲ್ಲಿ ದಿನಾ 10 ಗಂಟೆ ಮಾನವೀಯ ಕದನ ವಿರಾಮವನ್ನು ಇಸ್ರೇಲ್ ಘೋಷಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್)ನ ಮಾಜಿ ವಕ್ತಾರ ಜೊನಾಥನ್ ಕಾನ್ರಿಕಸ್ ಹೇಳಿದ್ದಾರೆ.
ಮಾನವೀಯ ಕದನ ವಿರಾಮ ಜಾರಿಗೊಳಿಸುವುದಾಗಿ ಇಸ್ರೇಲ್ ಹೇಳಿದೆ. ಇಸ್ರೇಲ್ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವುದನ್ನು ಇದು ತೋರಿಸಿದೆ ಎಂದವರು ಹೇಳಿದ್ದಾರೆ. ಅಲ್-ಮವಾಸಿ, ಡೀರ್ ಅಲ್-ಬಲಾಹ್ ಮತ್ತು ಗಾಝಾ ನಗರ ಸೇರಿದಂತೆ ಐಡಿಎಫ್ ಪದಾತಿ ದಳ ಈಗ ಕಾರ್ಯನಿರ್ವಹಿಸದ ಪ್ರದೇಶಗಳಲ್ಲಿ, ಮುಂದಿನ ಸೂಚನೆಯವರೆಗೆ ಪ್ರತೀ ದಿನ ಮಾನವೀಯ ವಿರಾಮ ಅನ್ವಯಿಸುತ್ತದೆ ಎಂದು ಇಸ್ರೇಲ್ ಮಿಲಿಟರಿ ರವಿವಾರ ಘೋಷಿಸಿದೆ.
Next Story





