ಇರಾನಿನ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ

ಸಾಂದರ್ಭಿಕ ಚಿತ್ರ
ಟೆಹ್ರಾನ್: ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ ಬಳಿಕವೂ ಇಸ್ರೇಲ್ ದಾಳಿ ನಡೆಸಿರುವುದಾಗಿ ಇರಾನಿನ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಉತ್ತರ ಇರಾನಿನ ಬಬೋಲ್ ಮತ್ತು ಬಬೋಲ್ಸರ್ ನಗರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಟೆಹ್ರಾನಿನಲ್ಲೂ ಸ್ಫೋಟದ ಸದ್ದು ಕೇಳಿಸಿದೆ ಎಂದು ವರದಿ ಹೇಳಿದೆ.
ಈ ಮಧ್ಯೆ, ಸೋಮವಾರ ಇಸ್ರೇಲಿನ ಕ್ಷಿಪಣಿ ದಾಳಿಯಲ್ಲಿ ಇರಾನಿನ ಅರೆ ಸೇನಾಪಡೆಯ ಗುಪ್ತಚರ ವಿಭಾಗದ ಕಮಾಂಡರ್ ಮುಹಮ್ಮದ್ ಯೂಸೆಫ್ವಾಂಡ್ ಸಾವನ್ನಪ್ಪಿರುವುದಾಗಿ ಐಆರ್ಜಿಸಿ ದೃಢಪಡಿಸಿದೆ.
Next Story