ಹಮಾಸ್ ಮಿಲಿಟರಿ ಗುಪ್ತಚರ ವಿಭಾಗದ ಮುಖ್ಯಸ್ಥ ಹತ್ಯೆ: ಇಸ್ರೇಲ್

Photo: dailypioneer
ಜೆರುಸಲೇಂ, ಎ.29: ಉತ್ತರ ಗಾಝಾ ಪಟ್ಟಿಯಲ್ಲಿ ಹಮಾಸ್ ನ ಮಿಲಿಟರಿ ಗುಪ್ತಚರ ವಿಭಾಗದ ಕಾರ್ಯಾಚರಣೆಯ ಮುಖ್ಯಸ್ಥ ಇಯಾದ್ ಅಹ್ಮದ್ ಅಬ್ದ್ ಅಲ್-ರಹ್ಮಾನ್ ಶಂಬರಿಯನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಭದ್ರತಾ ಪಡೆ (ಐಡಿಎಫ್) ಬುಧವಾರ ಹೇಳಿದೆ.
ಅಕ್ಟೋಬರ್ 7ರ ಹತ್ಯಾಕಾಂಡದ ಸಮಯದಲ್ಲಿ ಹಮಾಸ್ ನ ಒಳನುಸುಳುವಿಕೆಯನ್ನು ಯೋಜಿಸುವಲ್ಲಿ ಶಂಬರಿ ಸಕ್ರಿಯವಾಗಿ ಭಾಗವಹಿಸಿದ್ದು, ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಗಾಝಾ ಪಟ್ಟಿಯ ಕಾರ್ಯಾಚರಣೆಯ ತಂತ್ರಾತ್ಮಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಸ್ರೇಲಿ ಪಡೆಗಳ ವಿರುದ್ಧ ದಾಳಿ ನಡೆಸುವ ಉದ್ದೇಶದಿಂದ ಗುಪ್ತಚರ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ಹೊಂದಿದ್ದರು ಎಂದು ಐಡಿಎಫ್ ಹೇಳಿಕೆ ತಿಳಿಸಿದೆ.
Next Story




