ಚೀನಾದ ಆನ್ ಲೈನ್ ಭೂಪಟದಲ್ಲಿ ಇಸ್ರೇಲ್ ನಾಪತ್ತೆ!

Image courtesy: @jacksonhinklle/X
ಬೀಜಿಂಗ್: ಗಾಝಾ ಮೇಲೆ ಇಸ್ರೇಲ್ ತನ್ನ ದಾಳಿ ಮುಂದುವರಿಸಿರುವ ನಡುವೆಯೇ ಚೀನಾವು ತನ್ನ ಆನ್ ಲೈನ್ ಭೂಪಟದಿಂದ ಇಸ್ರೇಲ್ ಅನ್ನು ತೆಗೆದು ಹಾಕಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ, ಸೋಮವಾರ ಚೀನಾದ ಬೃಹತ್ ಕಂಪನಿಗಳಾದ Baidu ಹಾಗೂ ʼಆಲಿಬಾಬಾʼದಂಥ ಕಂಪನಿಗಳು ಇನ್ನು ಮುಂದೆ ಇಸ್ರೇಲ್ ಹೆಸರನ್ನು ಉಲ್ಲೇಖಿಸುವುದಿಲ್ಲ ಎಂದು Wall Street Journal ಸುದ್ದಿ ಸಂಸ್ಥೆ ವರದಿ ಮಾಡಿತ್ತು. ವರದಿಯ ಪ್ರಕಾರ, Baiduವಿನಲ್ಲಿರುವ ಡಿಜಿಟಲ್ ಭೂಪಟದಲ್ಲಿ ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವೆ ಗಡಿ ಗುರುತನ್ನು ನಮೂದಿಸಿದೆಯಾದರೂ, ಇಸ್ರೇಲ್ ದೇಶದ ಹೆಸರನ್ನು ಗುರುತಿಸಿಲ್ಲ ಎಂದು ndtv.com ವರದಿ ಮಾಡಿದೆ.
ಆಲಿಬಾಬಾ ಭೂಪಟದಲ್ಲೂ ಇದೇ ಕಂಡು ಬಂದಿದ್ದು, ಲಕ್ಸೆಂಬರ್ಗ್ ನಂಥ ಸಣ್ಣ ದೇಶಗಳ ಹೆಸರನ್ನೂ ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಈ ಬದಲಾವಣೆಯ ಕುರಿತು ಆಲಿಬಾಬಾ ಮತ್ತು Baidu ಈವರೆಗೆ ಯಾವುದೇ ಅಧಿಕೃತ ವಿವರಣೆಯನ್ನು ನೀಡಿಲ್ಲ.
China has REMOVED ISRAEL from its online maps, including Baidu and Alibaba! pic.twitter.com/1TNrHAKou0
— Jackson Hinkle (@jacksonhinklle) October 31, 2023







