ರಫಾದ ಮೇಲೆ ಬಾಂಬ್ ಮಳೆಗರೆದ ಇಸ್ರೇಲ್
PC : PTI ಸಾಂದರ್ಭಿಕ ಚಿತ್ರ
ಗಾಝಾ: ಗಝಾದ ಜನನಿಬಿಡ ರಫಾ ನಗರದ ಮೇಲೆ ಬಾಂಬ್ ಮಳೆಗರೆದಿರುವ ಇಸ್ರೇಲ್, ಭೂದಾಳಿಯನ್ನೂ ಆರಂಭಿಸಿದೆ. ಈ ಮಧ್ಯೆ, ಕದನ ವಿರಾಮದ ಬಗ್ಗೆ ಈಜಿಪ್ಟ್ ನ ಕೈರೋದಲ್ಲಿ ಸಂಧಾನ ಮಾತುಕತೆ ಮುಂದುವರಿದಿದೆ.
ಅಂತರರಾಷ್ಟ್ರೀಯ ಆಕ್ಷೇಪದ ಹೊರತಾಗಿಯೂ ಇಸ್ರೇಲ್ ರಫಾ ಪ್ರದೇಶಕ್ಕೆ ಟ್ಯಾಂಕ್ಗಳನ್ನು ರವಾನಿಸಿದ್ದು ಈಜಿಪ್ಟ್-ರಫಾ ನಡುವಿನ ಪ್ರಮುಖ ಗಡಿದಾಟನ್ನು ವಶಕ್ಕೆ ಪಡೆದಿದೆ. ಮುತ್ತಿಗೆಗೆ ಒಳಗಾಗಿರುವ ಫೆಲೆಸ್ತೀನ್ ಪ್ರದೇಶಕ್ಕೆ ಅಂತರರಾಷ್ಟ್ರೀಯ ನೆರವು ಪೂರೈಕೆಗೆ ಇದರಿಂದ ಸಮಸ್ಯೆಯಾಗಲಿದೆ ಎಂದು ಅಮೆರಿಕ ಖಂಡಿಸಿದ್ದು ಇಸ್ರೇಲ್ಗೆ ಶಸ್ತ್ರಾಸ್ತ್ರ ಸಾಗಣೆಯನ್ನು ತಡೆಹಿಡಿದಿದೆ. ಈ ಮಧ್ಯೆ, ಗಾಝಾಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ಪ್ರಮುಖ ಗಡಿದಾಟು ಕರೆಮ್ ಶಲೋಮ್ ಅನ್ನು ಮತ್ತೆ ತೆರೆದಿರುವುದಾಗಿ ಇಸ್ರೇಲ್ ಘೋಷಿಸಿದೆ.
Next Story