ಗಾಝಾದಲ್ಲಿ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ಆರಂಭ; 7 ಇಸ್ರೇಲ್ ಒತ್ತೆಯಾಳುಗಳನ್ನು ರೆಡ್ ಕ್ರಾಸ್ಗೆ ಹಸ್ತಾಂತರಿಸಿದ ಹಮಾಸ್

Photo credit: X/ANI
ಗಾಝಾ : ಇಸ್ರೇಲ್ ಮತ್ತು ಹಮಾಸ್ ನಡುವಿನ ಹೊಸ ಗಾಝಾ ಕದನ ವಿರಾಮ ಒಪ್ಪಂದದ ಭಾಗವಾಗಿ ಸೋಮವಾರ ಬೆಳಿಗ್ಗೆ ಏಳು ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ರೆಡ್ ಕ್ರಾಸ್ಗೆ ಹಸ್ತಾಂತರಿಸಿದೆ.
ಎರಡು ವರ್ಷಗಳ ಭಯಾನಕ ಯುದ್ಧದ ನಂತರ 7 ಮಂದಿ ಒತ್ತೆಯಾಳುಗಳು ತಮ್ಮ ಮನೆಗೆ ಮರಳಲಿದ್ದಾರೆ. ಈಟನ್ ಮೋರ್, ಗಾಲಿ ಮತ್ತು ಜಿವ್ ಬೆರ್ಮನ್, ಮತನ್ ಆಂಗ್ರಿಸ್ಟ್, ಓಮ್ರಿ ಮಿರಾನ್, ಗೈ ಗಿಲ್ಬೋವಾ ದಲಾಲ್ ಮತ್ತು ಅಲೋನ್ ಅಹೆಲ್ ಅವರನ್ನು ಹಮಾಸ್ ರೆಡ್ಕ್ರಾಸ್ಗೆ ಹಸ್ತಾಂತರಿಸಿದೆ.
ಕದನ ವಿರಾಮ ಒಪ್ಪಂದದ ಪ್ರಕಾರ ಇಸ್ರೇಲ್ನಲ್ಲಿ ಬಂಧಿಸಲ್ಪಟ್ಟಿದ್ದ 1,900ಕ್ಕೂ ಹೆಚ್ಚು ಫೆಲೆಸ್ತೀನ್ ಕೈದಿಗಳಿಗೆ ಬದಲಾಗಿ 20 ಜೀವಂತ ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಬೇಕಿದೆ. ಈಗಾಗಲೇ ಮೊದಲ ಏಳು ಜನ ಒತ್ತೆಯಾಳುಗಳ ಬಿಡುಗಡೆಯಾಗಿದೆ. ಒಪ್ಪಂದದಂತೆ ಇನ್ನೂ 13 ಮಂದಿ ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ ನಡೆಯಲಿದೆ.
Next Story





