ಮಾಸ್ಕೋಗೆ ಹಮಾಸ್ ನಿಯೋಗ ಭೇಟಿ: ರಶ್ಯ ರಾಯಭಾರಿಗೆ ಇಸ್ರೇಲ್ ಸಮನ್ಸ್

ಅನಾಟೊಲಿ ವಿಕ್ಟೊರೋವ್ | Photo : israel.mid.ru/en/embassy/ambassador/
ಜೆರುಸಲೇಂ: ಕಳೆದ ವಾರ ಹಮಾಸ್ ನಿಯೋಗವೊಂದು ರಶ್ಯ ರಾಜಧಾನಿ ಮಾಸ್ಕೋಗೆ ಭೇಟಿ ನೀಡಿರುವುದನ್ನು ಖಂಡಿಸಿರುವ ಇಸ್ರೇಲ್, ರಶ್ಯದ ರಾಯಭಾರಿಯನ್ನು ಕರೆಸಿಕೊಂಡು ತನ್ನ ಪ್ರತಿಭಟನೆ ಸಲ್ಲಿಸಿದೆ ಎಂದು ವರದಿಯಾಗಿದೆ.
‘ಹಮಾಸ್ ಗೆ ಆಹ್ವಾನ ನೀಡಿರುವುದು ಇಸ್ರೇಲ್ ವಿರುದ್ಧದ ಭಯೋತ್ಪಾದನೆಯನ್ನು ಕಾನೂನು ಬದ್ಧಗೊಳಿಸಿದ ಸಂದೇಶವನ್ನು ರವಾನಿಸುತ್ತದೆ ಎಂದು ಇಸ್ರೇಲ್ ಗೆ ರಶ್ಯದ ರಾಯಭಾರಿ ಅನಾಟೊಲಿ ವಿಕ್ಟೊರೋವ್ ಗೆ ಸ್ಪಷ್ಟಪಡಿಸಲಾಗಿದೆ’ ಎಂದು ಇಸ್ರೇಲ್ ನ ವಿದೇಶಾಂಗ ಇಲಾಖೆ ಹೇಳಿದೆ. ಸಮನ್ಸ್ ವಾಗ್ದಂಡನೆಯಿಲ್ಲ, ಪ್ರತಿಭಟನೆ ಎಂದು ಇಲಾಖೆ ತಿಳಿಸಿದೆ.
ಆದರೆ ಹಮಾಸ್ ನಿಯೋಗವನ್ನು ಆಹ್ವಾನಿಸಿರುವುದು ಇಸ್ರೇಲ್-ಫೆಲೆಸ್ತೀನಿಯನ್ ಸಂಘರ್ಷಕ್ಕೆ ಪರಿಹಾರ ರೂಪಿಸುವ ಪ್ರಯತ್ನದ ಭಾಗವಾಗಿದೆ ಎಂದು ರಶ್ಯ ಸ್ಪಷ್ಟಪಡಿಸಿದೆ.
Next Story





