ಗಾಝಾದಲ್ಲಿ ಕೆಫೆಯ ಮೇಲೆ ದಾಳಿ ನಡೆಸಲು 230 ಕೆ.ಜಿ. ಬಾಂಬ್ ಬಳಸಿದ ಇಸ್ರೇಲ್!

PC | X ; @senguptacanada
ಜೆರುಸಲೇಂ: ಪಶ್ಚಿಮ ಗಾಝಾ ನಗರದಲ್ಲಿ ಸೋಮವಾರ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹಾಗೂ ಸ್ಥಳೀಯ ನಿವಾಸಿಗಳಿಂದ ತುಂಬಿತುಳುಕುತ್ತಿದ್ದ ಸಮುದ್ರತೀರದ ಜನಪ್ರಿಯ ಕೆಫೆಯೊಂದರ ಮೇಲೆ ದಾಳಿ ನಡೆಸಲು ಇಸ್ರೇಲ್ ಸೇನೆಯು 230 ಕೆ.ಜಿ. ಭಾರದ ಅಮೆರಿಕನ್ ನಿರ್ಮಿತ ಬಾಂಬನ್ನು ಬಳಸಿದ್ದಾಗಿ ವರದಿಯಾಗಿದೆ. ನಾಗರಿಕರು, ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಆಶ್ರಯ ಪಡೆದಿದ್ದ ಅಲ್-ಬಕಾ ಕೆಫೆಯ ಮೇಲೆ ದಾಳಿ ನಡೆಸಲು ಇಸ್ರೇಲ್ ಎಂಕೆ-82 ಮಾದರಿಯ 230 ಕೆ.ಜಿ. ಬಾಂಬನ್ನು ಬಳಸಿದೆಯೆಂಬುದು, ಹೊಟೇಲ್ನ ಭಗ್ನಾವಶೇಷಗಳ ಪರೀಕ್ಷೆಯಿಂದ ತಿಳಿದುಬಂದಿದೆ.
ಎಂಕೆ-82 ಬಾಂಬ್ ಬೃಹತ್ ಪ್ರಮಾಣದ ಸ್ಫೋಟವನ್ನು ಸೃಷ್ಟಿಸುತ್ತದೆ ಹಾಗೂ ಅದು ವಿಸ್ತಾರವಾದ ಪ್ರದೇಶಕ್ಕೆ ಮೊನಚಾದ ಲೋಹದ ಚೂರುಗಳನ್ನು ಚದುರಿಸುವುದರಿಂದ ಭಾರೀ ಸಂಖ್ಯೆಯ ನಾಗರಿಕರು ಹಾನಿಗೊಳಗಾಗುತ್ತಾರೆ. ನಿಶ್ಚಿತವಾಗಿಯೂ ಇದು ಕಾನೂನುಬಾಹಿರ ಹಾಗೂ ಯುದ್ಧಪರಾಧ ಎಂದು ‘ದಿ ಗಾರ್ಡಿಯನ್’ ಪತ್ರಿಕೆಯ ವರದಿ ತಿಳಿಸಿದೆ.
ಅಲ್-ಬಕಾ ಕೆಫೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ಬಾಂಬ್ ದಾಳಿಯಲ್ಲಿ ಪ್ರಮುಖ ಯುದ್ಧ ವರದಿಗಾರ ಹಾಗೂ ಫೆಲೆಸ್ತೀನ್ ಚಿತ್ರನಟ ಇಸ್ಮಾಯೀಲ್ ಅಬು ಹತಾಬ್ ಸೇರಿದಂತೆ 24 ಮಂದಿ ಸಾವನ್ನಪ್ಪಿದ್ದಾರೆ.
“The Israeli military used a 500lb (230kg) bomb – a powerful and indiscriminate weapon that generates a massive blast wave and scatters shrapnel over a wide area – when it attacked a crowded beachfront cafe in Gaza on Monday, according to the Guardian.” https://t.co/aEeJYCVv4P
— Golnar Motevalli (@golnarM) July 3, 2025







