ಇಸ್ರೇಲ್ ನಿಂದ ವಾಯು-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿ ಬಳಕೆ: IRGC ಆರೋಪ

Photo Credit : PTI
ಟೆಹರಾನ್: ಇರಾನ್ ನ ವಿವಿಧ ನೆಲೆಗಳ ಮೇಲೆ ನಡೆಸಲಾದ ದಾಳಿಗಳಲ್ಲಿ ಇಸ್ರೇಲ್ ವಾಯು-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಆರೋಪಿಸಿದೆ ಎಂದು Aljazeera ವರದಿ ಮಾಡಿದೆ.
"ನಮ್ಮ ನೆಲದ ಮೇಲಿನ ಗುರಿಗಳನ್ನು ಹೊಡೆಯಲು ಇಸ್ರೇಲ್ ವಾಯು-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿದೆ" ಎಂದು IRGC ತನ್ನ ಹೇಳಿಕೆಯಲ್ಲಿ ತಿಳಿಸಿದೆ.
IRGCಯ ಈ ಹೇಳಿಕೆಯನ್ನು ಇರಾನ್ ನ ಅಧಿಕೃತ ಸುದ್ದಿ ಸಂಸ್ಥೆ IRNA ಪ್ರಕಟಿಸಿದೆ.
ದಾಳಿಯಲ್ಲಿ ಬಳಸಲಾದ ಕ್ಷಿಪಣಿಗಳ ಸಂಖ್ಯೆ, ಗುರಿಯಾಗಿದ್ದ ಪ್ರದೇಶಗಳು ಹಾಗೂ ಹಾನಿಯ ಪ್ರಮಾಣದ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.
Next Story




