ಪಶ್ಚಿಮದಂಡೆ: 19 ಹೊಸ ವಸಾಹತುಗಳಿಗೆ ಇಸ್ರೇಲ್ ನ ಭದ್ರತಾ ಸಂಪುಟ ಅನುಮೋದನೆ

PC : aljazeera.com (ಸಾಂದರ್ಭಿಕ ಚಿತ್ರ)
ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯಲ್ಲಿ 19 ಹೊಸ ವಸಾಹತುಗಳಿಗೆ ಇಸ್ರೇಲ್ ನ ಭದ್ರತಾ ಕ್ಯಾಬಿನೆಟ್ ಅನುಮೋದನೆ ನೀಡಿರುವುದಾಗಿ ಇಸ್ರೇಲ್ ನ ವಿತ್ತಸಚಿವ ಬೆಜಾಲೆಲ್ ಸ್ಮೊಟ್ರಿಚ್ ಹೇಳಿದ್ದು ಈ ಕ್ರಮವು ಫೆಲೆಸ್ತೀನಿಯನ್ ರಾಷ್ಟ್ರ ಸ್ಥಾಪನೆಯನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದಿದ್ದಾರೆ.
ಇದರೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಇಸ್ರೇಲ್ ನ ಸಂಪುಟ ಅನುಮೋದನೆ ನೀಡಿರುವ ವಸಾಹತುಗಳ ಸಂಖ್ಯೆ 69ಕ್ಕೇರಿದೆ. `ವಸಾಹತುಗಳ ಸ್ಥಾಪನೆಯು ಫೆಲೆಸ್ತೀನಿಯನ್ ರಾಷ್ಟ್ರ ಸ್ಥಾಪನೆಯನ್ನು ತಡೆಯುವ ಗುರಿಯನ್ನೂ ಹೊಂದಿದೆ. ನಮ್ಮ ಪೂರ್ವಜರ ಪರಂಪರೆಯ ಭೂಮಿಯನ್ನು ನಾವು ಅಭಿವೃದ್ಧಿಪಡಿಸಿ, ವಸಾಹತುಗಳನ್ನು ನಿರ್ಮಿಸುತ್ತೇವೆ ಮತ್ತು ನೆಲೆಸುತ್ತೇವೆ' ಎಂದು ಬೆಜಾಲೆಲ್ ಹೇಳಿದ್ದಾರೆ.
ಪಶ್ಚಿಮದಂಡೆಯಲ್ಲಿ ಇಸ್ರೇಲ್ ವಸಾಹತುಗಳ ವಿಸ್ತರಣೆ ಅಂತರಾಷ್ಟ್ರೀಯ ಕಾನೂನಿನಡಿ ಕಾನೂನುಬಾಹಿರ ಎಂದು ಪರಿಗಣಿಸಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.
Next Story





