ಇಸ್ರೇಲ್ ನ ಅರಾದ್ ನಲ್ಲಿ ಇರಾನಿನಿಂದ ಕ್ಷಿಪಣಿ ದಾಳಿ | ಇಂಟರ್ ಸೆಪ್ಟರ್ ವೈಫಲ್ಯದ ಕುರಿತು ವಾಯುಪಡೆ ತನಿಖೆ: ವರದಿ

Photo Credit : aljazeera.com
ತೆಲ್ ಅವೀವ್, ಮಾ. 22: ದಕ್ಷಿಣ ಇಸ್ರೇಲ್ ನ ಅರಾದ್ ನಗರದಲ್ಲಿ ನೇರವಾಗಿ ಬಿದ್ದ ಇರಾನ್ ನ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆಗಟ್ಟುವಲ್ಲಿ ಉಂಟಾದ ಇಂಟರ್ ಸೆಪ್ಟರ್ ವೈಫಲ್ಯದ ಕುರಿತು ಇಸ್ರೇಲ್ ವಾಯುಪಡೆ ತನಿಖೆ ಆರಂಭಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು Aljazeera ವರದಿ ಮಾಡಿದೆ.
ಇಸ್ರೇಲ್ ನ 'Arutz Sheva’ ಮಾಧ್ಯಮ ವರದಿ ಪ್ರಕಾರ, ಕ್ಷಿಪಣಿಯನ್ನು ಹೊಡೆದುರುಳಿಸಲು ನಡೆಸಿದ ಎರಡು ಇಂಟರ್ ಸೆಪ್ಟರ್ ಪ್ರಯತ್ನಗಳು ವಿಫಲವಾದವು ಎಂದು ಇಸ್ರೇಲ್ ರಕ್ಷಣಾ ಪಡೆಗಳನ್ನು ಉಲ್ಲೇಖಿಸಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾಯುಪ್ರತಿರೋಧ ವ್ಯವಸ್ಥೆಯ ಕಾರ್ಯಕ್ಷಮತೆ, ತಾಂತ್ರಿಕ ದೋಷಗಳು ಹಾಗೂ ಪ್ರತಿಕ್ರಿಯಾ ಕ್ರಮಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಯುತ್ತಿದೆ.
‘Times of Israel’ ವರದಿ ಪ್ರಕಾರ, ಅರಾದ್ ದಾಳಿಯಲ್ಲಿ ಒಟ್ಟು 59 ಮಂದಿ ಗಾಯಗೊಂಡಿದ್ದು, ಅವರಲ್ಲಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.





