ಲೆಬನಾನ್: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ; 13 ಮಂದಿ ಮೃತ್ಯು

Photo Credit : Ali Hankir/Reuters
ಬೈರೂತ್, ನ.19: ದಕ್ಷಿಣ ಲೆಬನಾನ್ ನಲ್ಲಿ ಫೆಲೆಸ್ತೀನಿನ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ.
ಕರಾವಳಿ ನಗರ ಸಿಡಾನ್ ನ ಹೊರವಲಯದಲ್ಲಿರುವ ಐನ್ ಎಲ್-ಹಿಲ್ವೆಯ ಮಸೀದಿಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಇಸ್ರೇಲ್ ನ ವಿರುದ್ಧದ ದಾಳಿಗೆ ಸಿದ್ಧತೆ ನಡೆಸಲು ಬಳಸಲಾಗುತ್ತಿದ್ದ ಹಮಾಸ್ ತರಬೇತಿ ಸ್ಥಳ ದಾಳಿಯ ಗುರಿಯಾಗಿತ್ತು. ಇಸ್ರೇಲ್ ಸೈನ್ಯವು ಹಮಾಸ್ ಗುಂಪಿನ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಈ ಹೇಳಿಕೆಯನ್ನು ಹಮಾಸ್ ನಿರಾಕರಿಸಿದ್ದು , ತರಬೇತಿ ಸ್ಥಳದ ಮೇಲೆ ಅಲ್ಲ, ಆಟದ ಮೈದಾನದ ಮೇಲೆ ವೈಮಾನಿಕ ದಾಳಿ ನಡೆದಿರುವುದಾಗಿ ಪ್ರತಿಪಾದಿಸಿದೆ.
Next Story





