ಇಸ್ರೇಲ್ ನ ಡ್ರೋನ್ ಸ್ಫೋಟಗೊಂಡು ಲೆಬನಾನ್ ನ ಇಬ್ಬರು ಯೋಧರ ಮೃತ್ಯು

PC : Reuters
ಬೈರೂತ್, ಆ.29: ತಾಂತ್ರಿಕ ಸಮಸ್ಯೆಯಿಂದ ಲೆಬನಾನ್ನ ಭೂಪ್ರದೇಶದಲ್ಲಿ ಪತನಗೊಂಡಿದ್ದ ಇಸ್ರೇಲ್ ನ ಡ್ರೋನ್ ಸ್ಫೋಟಗೊಂಡು ಲೆಬನಾನ್ ನ ಇಬ್ಬರು ಯೋಧರು ಸಾವನ್ನಪ್ಪಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಸೇನೆ ಹೇಳಿದೆ.
ದಕ್ಷಿಣ ಲೆಬನಾನ್ ನ ರಸ್ ಅಲ್-ನಖೌರ ಪ್ರದೇಶದಲ್ಲಿ ಹಿಜ್ಬುಲ್ಲಾದ ನೆಲೆಗಳ ಮೇಲೆ ದಾಳಿ ನಡೆಸುವ ಸಂದರ್ಭ ಇಸ್ರೇಲ್ ನ ಡ್ರೋನ್ ಪತನಗೊಂಡಿತ್ತು. ಪತನಗೊಂಡಿದ್ದ ಡ್ರೋನ್ ಅನ್ನು ಲೆಬನಾನ್ ನ ಮಿಲಿಟರಿ ಸಿಬ್ಬಂದಿ ಪರಿಶೀಲಿಸುತ್ತಿದ್ದಾಗ ಡ್ರೋನ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿದ್ದಾರೆ. ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Next Story





