Gaza | ಫೆಲೆಸ್ತೀನ್ ಗೋಲ್ ಕೀಪರ್ ಸಲೀಮ್ ಅಲ್-ಅಶ್ಕರ್ ರನ್ನು ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್ ಸೇನೆ

ಸಲೀಮ್ ಅಲ್-ಅಶ್ಕರ್ (Photo credit: aljazeera.com)
ಗಾಝಾ : ಫೆಲೆಸ್ತೀನ್ ಗೋಲ್ ಕೀಪರ್ ಸಲೀಮ್ ಅಲ್-ಅಶ್ಕರ್ ಅವರನ್ನು ಇಸ್ರೇಲ್ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.
ಖಾನ್ ಯೂನಿಸ್ ಈಶಾನ್ಯದಲ್ಲಿರುವ ಅಲ್-ಕರಾರಾ ಪಟ್ಟಣದಲ್ಲಿ ಸಲೀಮ್ ಅಲ್-ಅಶ್ಕರ್ ಅವರ ಹತ್ಯೆ ನಡೆದಿದೆ. 5 ತಿಂಗಳ ಹಿಂದೆ ವಿವಾಹವಾಗಿದ್ದ ಸಲೀಮ್ ಅಲ್-ಅಶ್ಕರ್ ಪತ್ನಿಯನ್ನು ಅಗಲಿದ್ದಾರೆ.
2023ರ ಅಕ್ಟೋಬರ್ನಲ್ಲಿ ಯುದ್ಧ ಪ್ರಾರಂಭವಾದ ಬಳಿಕ 1,000ಕ್ಕೂ ಅಧಿಕ ಫೆಲೆಸ್ತೀನ್ ಕ್ರೀಡಾಪಟುಗಳು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಫುಟ್ಬಾಲ್ ಅಸೋಸಿಯೇಷನ್ ಹೇಳಿದೆ.
ಸಲೀಮ್ ಅಲ್-ಅಶ್ಕರ್ ಅವರ ನಿಧನಕ್ಕೆ ಕುಟುಂಬಸ್ಥರು, ತಂಡದ ಸಹ ಆಟಗಾರರು ಮತ್ತು ವಿಶ್ವದ ಕ್ರೀಡಾ ವಲಯದಿಂದ ವ್ಯಾಪಕ ಸಂತಾಪ ವ್ಯಕ್ತವಾಗಿದೆ.
Next Story




