ನೀವು 19,000 ಮಕ್ಕಳನ್ನು ಕೊಂದಿದ್ದೀರಿ: ಇಸ್ರೇಲ್ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಸಂಸದನ ವಾಗ್ದಾಳಿ

PC : Screengrab \ X
ಜೆರುಸಲೇಂ: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಖಂಡಿಸಿದ ಇಸ್ರೇಲ್ ಸಂಸದ ಅಯ್ಮಾನ್ ಒಡೆಹ್ ಅವರನ್ನು ಬಲವಂತವಾಗಿ ಸಂಸತ್ತಿನ ವೇದಿಕೆಯಿಂದ ಹೊರಹಾಕಿದ ಘಟನೆ ವರದಿಯಾಗಿದೆ.
`ಸುಮಾರು ಒಂದೂವರೆ ವರ್ಷದ ಬಳಿಕ ನೀವು 19,000 ಮಕ್ಕಳನ್ನು, 53,000 ನಿವಾಸಿಗಳನ್ನು ಕೊಂದಿದ್ದೀರಿ. ಎಲ್ಲಾ ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳನ್ನು ನಾಶಗೊಳಿಸಿದ್ದೀರಿ. ರಾಜಕೀಯ ಗೆಲುವು ಇಲ್ಲ ಎಂದು ನೀವು ಭಾವಿಸಿದ್ದೀರಿ. ಆದ್ದರಿಂದಲೇ ಹುಚ್ಚರಂತೆ ವರ್ತಿಸುತ್ತಿದ್ದೀರಿ' ಎಂದು ಸಂಸತ್ತಿನ ವೇದಿಕೆಯಲ್ಲಿ ಒಡೆಹ್ ನೀಡಿದ ಹೇಳಿಕೆ ಸಂಸತ್ತಿನಲ್ಲಿ ಗದ್ದಲ, ಗೊಂದಲಕ್ಕೆ ಕಾರಣವಾಯಿತು. ತಕ್ಷಣ ಅವರನ್ನು ಬಲವಂತವಾಗಿ ಹೊರಗೆ ಹಾಕಲಾಗಿದೆ. ಹೊರಗೆ ಕರೆದೊಯ್ಯುವಾಗಲೂ ಅವರು ಸರ್ಕಾರದ ವಿರುದ್ಧದ ವಾಗ್ದಾಳಿ ಮುಂದುವರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
“La única democracia en Oriente Medio”. Ayman Odeh, diputado en el Parlamento del Estado genocida israelí, es expulsado de la tribuna por decir la verdad. pic.twitter.com/ZOiuYZjtu0
— Paco Arnau (@ciudadfutura) May 21, 2025







