ಇಸ್ರೇಲ್: ಒತ್ತೆಯಾಳುಗಳ ಕುಟುಂಬದ ಸದಸ್ಯರು, ಭದ್ರತಾ ಪಡೆಗಳ ನಡುವೆ ಘರ್ಷಣೆ

Photo : Social media
ಟೆಲ್ ಅವೀವ್ : ಇಸ್ರೇಲ್ನ ಸಂಸತ್ನಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಹಮಾಸ್ನ ಒತ್ತೆಸೆರೆಯಲ್ಲಿ ಇರುವವರ ಕುಟುಂಬದ ಸದಸ್ಯರ ನಡುವೆ ಸೋಮವಾರ ಘರ್ಷಣೆ ನಡೆದಿರುವುದಾಗಿ ವರದಿಯಾಗಿದೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ತಡೆಯುವಲ್ಲಿ ಸರಕಾರದ ವೈಫಲ್ಯದ ಬಗ್ಗೆ ಸಂಸತ್ನ ಸಮಿತಿ ನಡೆಸುತ್ತಿರುವ ತನಿಖೆಯಲ್ಲಿ ಹೇಳಿಕೆ ನೀಡಲು ಸಂತ್ರಸ್ತರ ಕುಟುಂಬದವರು ಸಂಸತ್ತಿನ ಸಂದರ್ಶಕರ ಗ್ಯಾಲರಿಯಲ್ಲಿದ್ದರು. ಆಗ ಭದ್ರತಾ ಸಿಬ್ಬಂದಿಯ ಜತೆ ಆರಂಭವಾದ ಮಾತಿನ ಚಕಮಕಿ ಕ್ರಮೇಣ ಘರ್ಷಣೆಗೆ ತಿರುಗಿದೆ. ಸಂತ್ರಸ್ತರ ಕುಟುಂಬವರು ಭದ್ರತಾ ಸಿಬ್ಬಂದಿಯ ಜತೆ ಕೈಕೈ ಮಿಲಾಯಿಸಿದರು. ಅಂತಿಮವಾಗಿ ಸಂತ್ರಸ್ತರ ಕುಟುಂಬದವರು ಸಂಸತ್ ಭವನದಿಂದ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ.
Next Story





