ಇರಾನ್ನ ಆರು ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿದ್ದೇವೆ: ಇಸ್ರೇಲಿ ಸೇನೆ

File Photo: PTI
ಟೆಲ್ ಅವೀವ್: ಪಶ್ಚಿಮ, ಪೂರ್ವ ಮತ್ತು ಮಧ್ಯ ಇರಾನ್ನಲ್ಲಿ ಕನಿಷ್ಠ ಆರು ವಿಮಾನ ನಿಲ್ದಾಣಗಳ ಮೇಲೆ ವಾಯುದಾಳಿ ನಡೆಸಿರುವುದಾಗಿ ಇಸ್ರೇಲಿ ಸೇನೆ ಹೇಳಿದೆ.
X ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ದೂರದಿಂದಲೇ ಕಾರ್ಯನಿರ್ವಹಿಸುವ ನಮ್ಮ ಸೇನಾ ವಿಮಾನಗಳು, ಇರಾನಿನ 15 ವಿಮಾನಗಳು ಮತ್ತು ಹೆಲಿಕಾಪ್ಟರ್ಗಳನ್ನು ನಾಶಪಡಿಸಿವೆ ಎಂದು ಇಸ್ರೇಲ್ ಹೇಳಿದೆ.
"ಈ ದಾಳಿಗಳು ರನ್ವೇಗಳು, ಭೂಗತ ಬಂಕರ್ಗಳು, ಇಂಧನ ತುಂಬುವ ವಿಮಾನ ಮತ್ತು ಇರಾನ್ ಆಡಳಿತಕ್ಕೆ ಸೇರಿದ F-14, F-5 ಮತ್ತು AH-1 ವಿಮಾನಗಳನ್ನು ಹಾನಿಗೊಳಿಸಿವೆ" ಎಂದು ಅದು ಹೇಳಿದೆ.
Next Story





