ಇರಾನ್ ನಾದ್ಯಂತ ಇಸ್ರೇಲ್ ನಿಂದ ‘ದೊಡ್ಡ ಪ್ರಮಾಣದ’ ದಾಳಿ; 3 ವಿಮಾನ ನಿಲ್ದಾಣಗಳು ಗುರಿ

ಸಾಂದರ್ಭಿಕ ಚಿತ್ರ | Photo Credit : freepik
ಟೆಹ್ರಾನ್: ಇರಾನ್ ನಾದ್ಯಂತ ‘ದೊಡ್ಡ ಪ್ರಮಾಣದ’ ದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಟೆಹ್ರಾನ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸರಣಿ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ.
ವೈಮಾನಿಕ ದಾಳಿಗಳಲ್ಲಿ ಇರಾನ್ ನ ಮೂರು ಪ್ರಮುಖ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲಿ ಸೇನೆ ತಿಳಿಸಿದೆ. ಈ ದಾಳಿಗಳು ಮಿಲಿಟರಿ ನೆಇ ಉದ್ದೇಶಿಸಿಕೊಂಡಿದ್ದವು ಎಂದು ಅದು ಸ್ಪಷ್ಟಪಡಿಸಿದೆ.
ಗುರಿಯಾಗಿದ್ದ ವಿಮಾನ ನಿಲ್ದಾಣಗಳನ್ನು “ಬಹ್ರಾಮ್ ವಿಮಾನ ನಿಲ್ದಾಣ, ಮೆಹ್ರಾಬಾದ್ ವಿಮಾನ ನಿಲ್ದಾಣ ಮತ್ತು ಅಜ್ಮಯೇಶ್ ವಿಮಾನ ನಿಲ್ದಾಣ” ಎಂದು ಗುರುತಿಸಲಾಗಿದೆ. ದಾಳಿಯಿಂದ ಸಂಭವಿಸಿದ ಹಾನಿ ಹಾಗೂ ಸಾವು-ನೋವುಗಳ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ ಎಂದು Aljazeera ವರದಿ ಮಾಡಿದೆ.
Next Story





