ಹಮಾಸ್ ದಾಳಿ ಬೆನ್ನಲ್ಲೇ 8 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ತಲುಪಿದ ಇಸ್ರೇಲಿ ಶೆಕೆಲ್
ಆರ್ಥಿಕ ಸ್ಥಿರತೆಗಾಗಿ 30 ಬಿಲಿಯನ್ ಡಾಲರ್ ವಿದೇಶಿ ಕರೆನ್ಸಿ ಮಾರಾಟ ಮಾಡಲು ಮುಂದಾದ ಬ್ಯಾಂಕ್ ಆಫ್ ಇಸ್ರೇಲ್

Photo: PTI
ಸಿಂಗಾಪುರ್: ಇಸ್ರೇಲ್ ಮೇಲೆ ಹಮಾಸ್ ದಾಳಿ ಮುಂದುವರಿದಿರುವಂತೆಯೇ ಇಸ್ರೇಲಿ ಶೆಕೆಲ್ ಬೆಲೆ ಅಮೆರಿಕನ್ ಡಾಲರ್ ಎದುರು ಎಂಟು ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ತಲುಪಿದೆ.
ವರದಿಗಳ ಪ್ರಕಾರ ಇಸ್ರೇಲಿ ಶೆಕೆಲ್ ಶೇ 2ಕ್ಕೂ ಹೆಚ್ಚು ಕುಸಿತಗೊಂಡು ತಲಾ ಡಾಲರ್ಗೆ 3.92 ರಷ್ಟು ಕಡಿಮೆಯಾಗಿದೆ. ಸದ್ಯ ಇನ್ನೂ 0.6 ಶೇಕಡಾ ಕುಸಿತ ಕಂಡು ಡಾಲರ್ ಎದುರು 3.86ರಷ್ಟು ಕಡಿಮೆಯಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಸ್ಥಿರತೆಗಾಗಿ 30 ಬಿಲಿಯನ್ ಡಾಲರ್ನಷ್ಟು ವಿದೇಶಿ ಕರೆನ್ಸಿಯನ್ನು ಮಾರಾಟ ಮಾಡುವುದಾಗಿ ಬ್ಯಾಂಕ್ ಆಫ್ ಇಸ್ರೇಲ್ ಹೇಳಿದೆ.
Next Story





