ಇಸ್ರೇಲ್ ನ ಡಿಮೋನಾ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ: ಇಂಟರ್ ಸೆಪ್ಟರ್ ನಾಶ, 50ಕ್ಕೂ ಹೆಚ್ಚು ಮಂದಿ ಮೃತ್ಯು

Photo Credit : aljazeera.com
ಡಿಮೋನಾ (ಇಸ್ರೇಲ್), ಮಾ. 22: ಇಸ್ರೇಲ್ ನ ಪರಮಾಣು ಯೋಜನೆಯ ಪ್ರಮುಖ ಕೇಂದ್ರವಾಗಿರುವ ದಕ್ಷಿಣ ಭಾಗದ ಡಿಮೋನಾ ನಗರವು ಶನಿವಾರ ಇರಾನ್ನ ಭಾರೀ ಕ್ಷಿಪಣಿ ದಾಳಿಗೆ ಗುರಿಯಾಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯೊಂದು ನಗರವನ್ನು ರಕ್ಷಿಸುವ ಇಂಟರ್ ಸೆಪ್ಟರ್ ಭೇದಿಸಿ ನೇರವಾಗಿ ದಾಳಿ ನಡೆಸಿದೆ ಎಂದು Aljazeera ವರದಿ ಮಾಡಿದೆ.
ನೆಗೆವ್ ಮರುಭೂಮಿಯಲ್ಲಿರುವ ಡಿಮೋನಾ, ಇಸ್ರೇಲ್ನ ಪರಮಾಣು ಸೌಲಭ್ಯಗಳ ತವರೂರಾಗಿ ಪರಿಗಣಿಸಲ್ಪಟ್ಟಿದ್ದು, ಈ ದಾಳಿ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದೆ. ನಗರದಲ್ಲಿನ ಹಲವು ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿ ವ್ಯಾಪಕ ಹಾನಿ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.
ಈ ದಾಳಿಯಲ್ಲಿ ಸಾವಿನ ಸಂಖ್ಯೆ 50 ಕ್ಕಿಂತ ಹೆಚ್ಚಾಗಿದೆ ಎನ್ನಲಾಗಿದೆ. ಗಾಯಗೊಂಡ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 12 ವರ್ಷದ ಬಾಲಕನೊಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇರಾನ್ ಅಧಿಕಾರಿಗಳ ಪ್ರಕಾರ, ತಮ್ಮ ನಟಾಂಜ್ ಪರಮಾಣು ಸೌಲಭ್ಯದ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಆ ದಾಳಿಯಲ್ಲಿ ಇಸ್ರೇಲ್ ಭಾಗವಹಿಸಿಲ್ಲ ಎಂದು ಇಸ್ರೇಲ್ ಹೇಳಿಕೊಂಡಿದ್ದು, ಅದು ಅಮೆರಿಕ ನಡೆಸಿದ ಕಾರ್ಯಾಚರಣೆ ಎಂದು ಸ್ಪಷ್ಟಪಡಿಸಿದೆ. ಅದೇ ವೇಳೆ, ಇಸ್ರೇಲ್ ಇತ್ತೀಚೆಗೆ ಟೆಹ್ರಾನ್ ನ ವಿಶ್ವವಿದ್ಯಾಲಯವೊಂದರಲ್ಲಿ ಇರುವ ಪರಮಾಣು ಶಸ್ತ್ರಾಸ್ತ್ರ ಸಂಶೋಧನಾ ಕೇಂದ್ರ ಸೇರಿದಂತೆ ಕೆಲವು ದಾಳಿಗಳಿಗನ್ನು ತಾನು ನಡೆಸಿರುವುದಾಗಿ ಒಪ್ಪಿಕೊಂಡಿದೆ.
ಡಿಮೋನಾ ನಗರವು ಶನಿವಾರ ದಾಳಿಯ ಗುರಿಯಾಗಿದ್ದು, ಕ್ಷಿಪಣಿಗಳು ಪ್ರವೇಶಿಸಲು ಯತ್ನಿಸಿದ ವೇಳೆ ಒಟ್ಟು 7 ಬಾರಿ ವಾಯುದಾಳಿಯ ಎಚ್ಚರಿಕೆ ನೀಡಲಾಗಿದೆ.
ಇಸ್ರೇಲ್ನ ಇಂಟರ್ ಸೆಪ್ಟರ್ ಗಳು ಸಾಮಾನ್ಯವಾಗಿ ಕ್ಷಿಪಣಿಗಳನ್ನು ತಡೆಹಿಡಿಯುತ್ತವೆ. ಈ ಬಾರಿ ಅವು ಹೇಗೆ ವಿಫಲವಾದವು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.







