ಜು. 5ರಂದು ಪಿಒಕೆ ಸಂಪೂರ್ಣ ಬಂದ್ಗೆ ಜೆಎಎಸಿ ನಾಯಕರ ಕರೆ

Photo Credit : X/@JAAC__Official
ಮುಜಾಫರಾಬಾದ್, ಜು.4: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಅಶಾಂತಿಯ ತೀವ್ರ ಸ್ವರೂಪವಾಗಿ, ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (ಜೆಎಎಸಿ) ನಾಯಕ ಖ್ವಾಜಾ ಮೆಹ್ರಾನ್ ಅವರು ಜುಲೈ 5 ರಂದು (ರವಿವಾರ) ಇಡೀ ಪ್ರದೇಶದಾದ್ಯಂತ ಸಂಪೂರ್ಣ ಬಂದ್ಗೆ ಕರೆ ನೀಡಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನ ಸರಕಾರದ ದಬ್ಬಾಳಿಕೆ ಮತ್ತು ರಕ್ತಪಾತದ ವಿರುದ್ಧ ಪ್ರತಿಭಟಿಸಲು ರಸ್ತೆಗಳು, ಮಾರುಕಟ್ಟೆಗಳು, ಪ್ರವೇಶ ದ್ವಾರಗಳು ಮತ್ತು ಸಾಮಾನ್ಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಕೇಳಿಕೊಂಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳನ್ನು ಬೀದಿಗೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ, ಹಾಗೆಯೇ, ವಿದೇಶಗಳಲ್ಲಿರುವ ಕಾಶ್ಮೀರಿ ವಲಸಿಗರು ಒಟ್ಟಾಗಿ ಪಾಕಿಸ್ತಾನಿ ಆಡಳಿತದ ವಿರುದ್ಧ ಧ್ವನಿ ಎತ್ತುವಂತೆ ಮೆಹ್ರಾನ್ ಮನವಿ ಮಾಡಿರುವುದಾಗಿ ವರದಿ ತಿಳಿಸಿದೆ.
Next Story




