ಜಪಾನ್ | ಸಮ್ಮಿಶ್ರ ಸರಕಾರ ರಚನೆಗೆ ಒಗ್ಗೂಡಿದ ಎಲ್ಡಿಪಿ- ಇಷಿನ್ ಪಕ್ಷ

ಲಿಬರಲ್ ಡೆಮಾಕ್ರಟಿಕ್ (Photo credit: ddnews.gov.in)
ಟೋಕಿಯೊ, ಅ.19: ಜಪಾನ್ನಲ್ಲಿ ಸಮ್ಮಿಶ್ರ ಸರಕಾರ ರಚನೆಗೆ ಲಿಬರಲ್ ಡೆಮಾಕ್ರಟಿಕ್ ಪಕ್ಷ (ಎಲ್ಡಿಪಿ) ಮತ್ತು ಬಲಪಂಥೀಯ ಸಣ್ಣ ಪಕ್ಷಗಳ ಒಕ್ಕೂಟ `ಇಷಿನ್' ಒಪ್ಪಿಕೊಂಡಿದ್ದು ಈ ಮೂಲಕ ಜಪಾನ್ನ ಪ್ರಪ್ರಥಮ ಮಹಿಳಾ ಪ್ರಧಾನಿಯ ಆಡಳಿತಕ್ಕೆ ವೇದಿಕೆ ಸಜ್ಜುಗೊಂಡಿದೆ ಎಂದು ಕ್ಯೊಡೊ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.
ಕನ್ಸರ್ವೇಟಿವ್ ಎಲ್ಡಿಪಿ ಪಕ್ಷದ ನಾಯಕಿ ಸಾನೆ ತಕೈಚಿ ಹಾಗೂ ಸಣ್ಣ ಎಡಪಕ್ಷಗಳ ಒಕ್ಕೂಟ `ಇಷಿನ್'ನ ಮುಖ್ಯಸ್ಥ ಹಿರೊಫುಮಿ ಯೊಷಿಮುರಾ ನಡುವಿನ ಮಾತುಕತೆ ಯಶಸ್ವಿಯಾಗಿದ್ದು ಈ ಕುರಿತ ಒಪ್ಪಂದಕ್ಕೆ ಸೋಮವಾರ ಸಹಿ ಹಾಕುವ ನಿರೀಕ್ಷೆಯಿದೆ. ಒಪ್ಪಂದದ ಪ್ರಕಾರ ಸಾನೆ ತಕೈಚಿ ಜಪಾನಿನ ಪ್ರಥಮ ಮಹಿಳಾ ಪ್ರಧಾನಿ ಎಂಬ ಹಿರಿಮೆಗೆ ಪಾತ್ರವಾಗುವುದು ಬಹುತೇಕ ಖಚಿತವಾಗಿದೆ. ಮಂಗಳವಾರ ಸಂಸತ್ತಿನಲ್ಲಿ ನಡೆಯುವ ಮತದಾನದಲ್ಲಿ ತಕೈಚಿ ಪ್ರಧಾನಿಯಾಗಿ ಆಯ್ಕೆಗೊಂಡ ಬಳಿಕ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡಲು ಇಷಿನ್ ಪಕ್ಷ ನಿರ್ಧರಿಸಿದೆ ಎಂದು ವರದಿ ಹೇಳಿದೆ.
Next Story





