ಎಐ ಮೇಲೆ ಅತಿಯಾದ ನಿಯಂತ್ರಣ ಸಲ್ಲದು: ಜೆ.ಡಿ.ವಾನ್ಸ್

Photo credit | X/@JDVance
ಪ್ಯಾರಿಸ್: ಕೃತಕ ಬುದ್ಧಿಮತ್ತೆ ಮೇಲೆ ಅಪಾರವಾದ ನಿಯಮಾವಳಿಗಳನ್ನು ಹೇರುವುದರಿಂದ ಈಗಷ್ಟೇ ಆರಂಭಿಕ ಹಂತದಲ್ಲಿ ಈ ತಂತ್ರಜ್ಞಾನದ ಕತ್ತನ್ನು ಹಿಸುಕಿದಂತಾಗುವುದೆಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಹೇಳಿದ್ದಾರೆ. ಎಐ ಕಂಟೆಂಟ್ಗಳನ್ನು ನಿಯಂತ್ರಿಸುವುದು ಸರ್ವಾಧಿಕಾರದ ಸೆನ್ಸಾರ್ಶಿಪ್ ಎನಿಸಿಕೊಳ್ಳುತ್ತದೆ ಎಂದವರು ಹೇಳಿದ್ದಾರೆ.
ಯುರೋಪ್ನ ಡಿಜಿಟಲ್ ಸೇವಾ ಕಾಯ್ದೆಗಳು ಹಾಗೂ ಯುರೋಪ್ನ ಆನ್ಲೈನ್ ಖಾಸಗಿತನ ಕಾಯ್ದೆಗಳಿಂದಾಗಿ ಸಣ್ಣಪುಟ್ಟ ಕಂಪೆನಿಗಳು ಬಾಧಿತವಾಗಿವೆಯೆಂದವರು ಆರೋಪಿಸಿದರು.
ಮುಂದಿನ ಎಐ ಶೃಂಗಸಭೆ ಭಾರತದಲ್ಲಿ
ಪ್ಯಾರಿಸ್,ಫೆ.12: ಮುಂದಿನ ಕೃತಕ ಬುದ್ಧಿಮತ್ತೆ (ಎಐ)ಶೃಂಗಸಭೆಯು ಭಾರತದಲ್ಲಿ ನಡೆಯಲಿದೆಯೆಂದು ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಘೋಷಿಸಿದ್ದಾರೆ. ಕಾರ್ಯಕ್ರಮದ ಸಹ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ≠ ನರೇಂದ್ರ ಮೋದಿ ಅವರು ಇದಕ್ಕೂ ಮುನ್ನ ಹೇಳಿಕೆಯೊಂದನ್ನು ನೀಡಿ, ಶೃಂಗಸಭೆಯ ಆತಿಥ್ಯ ವಹಿಸಲು ಭಾರತ ಸಂತಸಪಡುತ್ತದೆ ಎಂದು ಹೇಳಿದ್ದರು.





