ಜೆಫ್ರಿ ಎಪ್ಸ್ಟೀನ್ ಜೊತೆ ನಂಟು: ಬ್ರಿಟನ್ ನ ಮಾಜಿ ರಾಜಕುಮಾರ ಆಂಡ್ರ್ಯೂ ಬಂಧನ

ಆಂಡ್ರ್ಯೂ ಮೌಂಟ್ ಬ್ಯಾಟನ್ ವಿಂಡ್ಸರ್ |Photo Credit : AP , PTI
ಲಂಡನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ನಂಟು ಬಹಿರಂಗದ ನಂತರ ಮಾಜಿ ರಾಜಕುಮಾರ ಆಂಡ್ರ್ಯೂ ಮೌಂಟ್ ಬ್ಯಾಟನ್ ವಿಂಡ್ಸರ್ ಅವರನ್ನು ಬ್ರಿಟನ್ ಪೊಲೀಸರು ಬಂಧಿಸಿದ್ದಾರೆ.
ಜೆಫ್ರಿ ಎಪ್ಸ್ಟೀನ್ ಜೊತೆ ಲೈಂಗಿಕ ಅಪರಾಧದಲ್ಲಿ ಭಾಗಿಯಾದ ಆರೋಪದಲ್ಲಿ ಈ ಮೊದಲು ಆಂಡ್ರ್ಯೂ ಬ್ರಿಟನ್ ರಾಜಕುಮಾರ ಪಟ್ಟ ಹಾಗೂ ಭದ್ರತೆಯನ್ನು ಕಳೆದುಕೊಂಡಿದ್ದರು.
ಇದೀಗ ಥೇಮ್ಸ್ ವ್ಯಾಲಿ ಪೊಲೀಸರು, ಯುಕೆ ಕಾನೂನಿನಡಿಯಲ್ಲಿ ಮಾಜಿ ರಾಜಮನೆತನದ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ, 60ರ ಹರೆಯದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಗುರುವಾರ ಹೇಳಿಕೆಯೊಂದರಲ್ಲಿ, ಅಪರಾಧದ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.
ಬ್ರಿಟನ್ ನ ಅಧಿಕೃತ ವ್ಯಾಪಾರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು ಪ್ರಿನ್ಸ್ ಆಂಡ್ರ್ಯೂ ಎಂದೇ ಜನಪ್ರಿಯರಾಗಿದ್ದರು. ರಾಜಮನೆತನದ ಪ್ರಮುಖ ವ್ಯಕ್ತಿಯೊಬ್ಬರ ಬಂಧನವಾಗಿರುವುದು ಬ್ರಿಟನ್ನಲ್ಲಿ ಸಂಚಲನ ಮೂಡಿಸಿದೆ. ಆಂಡ್ರ್ಯೂ ಅವರ ಜನ್ಮದಿನವಾದ ಫೆಬ್ರವರಿ 19ರಂದು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




