ಜೋ ಬೈಡನ್ ರನ್ನು 2020ರಲ್ಲೇ ಗಲ್ಲಿಗೇರಿಸಲಾಯಿತು, ಅವರ ಬದಲಿಗೆ ತದ್ರೂಪಿಯನ್ನು ನೇಮಿಸಲಾಗಿತ್ತು : ವಿವಾದಾತ್ಮಕ ಪೋಸ್ಟ್ ಮಾಡಿದ ಟ್ರಂಪ್

ಜೋ ಬೈಡನ್ , ಡೊನಾಲ್ಡ್ ಟ್ರಂಪ್ | PTI
ವಾಶಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ತಡರಾತ್ರಿ ಟ್ರುತ್ ಸೋಷಿಯಲ್(Truth Social)ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರನ್ನು 2020ರಲ್ಲಿ ಗಲ್ಲಿಗೇರಿಸಲಾಯಿತು. ಆ ಬಳಿಕ ಅವರ ತದ್ರೂಪಿಯನ್ನು ನೇಮಿಸಲಾಗಿತ್ತು ಎಂದು ಹೇಳುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಯಾವುದೇ ವಿವರಣೆಯಿಲ್ಲದೆ ತಮ್ಮ ಪುಟದಲ್ಲಿ ಈ ಪೋಸ್ಟ್ ಮಾಡಿದ್ದಾರೆ.
ಜೋ ಬೈಡನ್ ಬಗ್ಗೆ ಜನರು ಕೆಟ್ಟದಾಗಿ ಭಾವಿಸಬಾರದು ಎಂದು ಟ್ರಂಪ್ ಹೇಳಿದ ಒಂದು ದಿನದ ನಂತರ ಅವರ ಪೋಸ್ಟ್ ಹೊರ ಬಿದ್ದಿದೆ. ʼಅವರು ಸ್ವಲ್ಪ ಕೆಟ್ಟ ವ್ಯಕ್ತಿ. ನೀವು ಅವನ ಬಗ್ಗೆ ವಿಷಾದಿಸುತ್ತಿದ್ದರೆ, ಅವನ ಬಗ್ಗೆ ವಿಷಾದಿಸಬೇಡಿ, ಏಕೆಂದರೆ ಅವನು ಕೆಟ್ಟವನುʼ ಎಂದು ಟ್ರಂಪ್ ಹೇಳಿದ್ದರು.
ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ದೃಢಪಟ್ಟಿರುವ ಬಗ್ಗೆ ಅವರ ಕಚೇರಿ ಇತ್ತೀಚೆಗೆ ತಿಳಿಸಿತ್ತು.
Next Story





