ಕ್ಯಾಲಿಫೋರ್ನಿಯಾದಲ್ಲಿ ವಿವೇಚನೆಯಿಲ್ಲದ ವಲಸೆ ಬಂಧನ ನಿಲ್ಲಿಸಲು ನ್ಯಾಯಾಧೀಶರ ಆದೇಶ

Photo: PTI
ನ್ಯೂಯಾರ್ಕ್: ಲಾಸ್ ಏಂಜಲೀಸ್ ಸೇರಿದಂತೆ ಕ್ಯಾಲಿಫೋರ್ನಿಯಾದ 7 ಕೌಂಟಿಗಳಲ್ಲಿ ವಿವೇಚನಾರಹಿತ ವಲಸಿಗರ ಬಂಧನವನ್ನು ನಿಲ್ಲಿಸುವಂತೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ಶುಕ್ರವಾರ ಟ್ರಂಪ್ ಆಡಳಿತಕ್ಕೆ ಆದೇಶಿಸಿದ್ದಾರೆ.
ಕ್ಯಾಲಿಫೋರ್ನಿಯಾದ 7 ಕೌಂಟಿಗಳಲ್ಲಿ ಜನಾಂಗ, ಜನಾಂಗೀಯತೆ ಅಥವಾ ಉದ್ಯೋಗದ ಆಧಾರದ ಮೇಲೆ ವಲಸೆ ಬಂಧನವನ್ನು ನಿಲ್ಲಿಸುವಂತೆ ಫೆಡರಲ್ ನ್ಯಾಯಾಧೀಶರು ಆದೇಶಿಸಿದ್ದಾರೆ. ಅಲ್ಲದೆ ಲಾಸ್ಏಂಜಲೀಸ್ ನಗರದಲ್ಲಿರುವ ಬಂಧನ ಕೇಂದ್ರಕ್ಕೆ ವಕೀಲರ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಆದೇಶದಲ್ಲಿ ಸೂಚಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಫೆಡರಲ್ ಏಜೆಂಟರು ಕಾನೂನುಬಾಹಿರವಾಗಿ ಲ್ಯಾಟಿನೊ ಸಮುದಾಯವನ್ನು ವಾರಂಟ್ರಹಿತ ಬಂಧನದ ಮೂಲಕ ಗುರಿಯಾಗಿಸಿಕೊಂಡಿದ್ದಾರೆ ಮತ್ತು ಬಂಧಿತರಿಗೆ ಕಾನೂನು ನೆರವು ಅವಕಾಶ ನಿರಾಕರಿಸಲಾಗಿದೆ ಎಂದು ವಲಸಿಗರ ವಕಾಲತ್ತು ಗುಂಪು ದಾಖಲಿಸಿದ ಮೊಕದ್ದಮೆಯನ್ನು ಪರಿಶೀಲಿಸಿದ ಅಮೆರಿಕದ ಜಿಲ್ಲಾ ನ್ಯಾಯಾಧೀಶರು ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.
Next Story





