ಕೈಲಾಸ ಮಾನಸಸರೋವರ ಯಾತ್ರೆ ಪುನರಾರಂಭಿಸಲು ಭಾರತ-ಚೀನಾ ಒಪ್ಪಿಗೆ

PC : PTI
ಬೀಜಿಂಗ್ : ಮಹತ್ವದ ಬೆಳವಣಿಗೆಯೊಂದರಲ್ಲಿ ಕೈಲಾಸ ಮಾನಸಸರೋವರ ಯಾತ್ರೆಯನ್ನು ಪುನರಾರಂಭಿಸಲು ಹಾಗೂ ಎರಡು ದೇಶಗಳ ನಡುವೆ 5 ವರ್ಷಗಳ ಬಳಿಕ ನೇರ ವಿಮಾನಗಳ ಪುನರಾರಂಭಕ್ಕೆ ಭಾರತ ಮತ್ತು ಚೀನಾ ಒಪ್ಪಿವೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಬೀಜಿಂಗ್ನಲ್ಲಿ ಚೀನಾದ ಸಹಾಯಕ ವಿದೇಶಾಂಗ ಸಚಿವ ಸುನ್ ವಿಡಾಂಗ್ ಜತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. 2025ರ ಬೇಸಿಗೆಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯ ಪುನರಾರಂಭಕ್ಕೆ , ಎರಡೂ ದೇಶಗಳ ನಡುವೆ ನೇರ ವಿಮಾನ ಪುನರಾರಂಭಿಸಲು ಹಾಗೂ ಗಡಿಯಾಚೆಗಿನ ನದಿ ಸಹಕಾರ , ಜನರಿಂದ ಜನರ ವಿನಿಮಯವನ್ನು ಉತ್ತೇಜಿಸಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ಮೂಲಗಳು ಹೇಳಿವೆ.
Next Story





