ಸೀಮಿತ ರಕ್ಷಣಾತ್ಮಕ ಉದ್ದೇಶಗಳಿಗೆ ಬ್ರಿಟನ್ ನೆಲೆ ಬಳಸಲು ಅಮೆರಿಕಕ್ಕೆ ಅವಕಾಶ: ಕೀರ್ ಸ್ಟಾರ್ಮರ್

ಕೀರ್ ಸ್ಟಾರ್ಮರ್ | Photo Credit : AP , PTI
ಲಂಡನ್, ಮಾ.2: ನಿರ್ದಿಷ್ಟ ಮತ್ತು ಸೀಮಿತ ರಕ್ಷಣಾತ್ಮಕ ಉದ್ದೇಶಗಳಿಗೆ ಬ್ರಿಟಿಷ್ ಮಿಲಿಟರಿ ನೆಲೆಗಳನ್ನು ಬಳಸುವ ಅಮೆರಿಕದ ಕೋರಿಕೆಯನ್ನು ಬ್ರಿಟನ್ ಒಪ್ಪಿಕೊಂಡಿದೆ ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಇರಾನಿನ ಕ್ಷಿಪಣಿ ತಾಣಗಳನ್ನು ಗುರಿಯಾಗಿಸಲು ಬ್ರಿಟಿಷ್ ನೆಲೆಗಳನ್ನು ಬಳಸಲು ಅಮೆರಿಕಕ್ಕೆ ಅನುಮತಿ ನೀಡಲಾಗುವುದು. ಇರಾನ್ನ ಮೇಲಿನ ಆರಂಭಿಕ ಅಮೆರಿಕ-ಇಸ್ರೇಲ್ ದಾಳಿಗಳಲ್ಲಿ ಬ್ರಿಟನ್ ಭಾಗಿಯಾಗಿಲ್ಲ ಮತ್ತು ಈಗಲೂ ಆಕ್ರಮಣಕಾರಿ ಕ್ರಮಗಳಿಗೆ ಸೇರುವುದಿಲ್ಲ. ಪ್ರದೇಶದಾದ್ಯಂತ ಇರಾನ್ ಮತ್ತಷ್ಟು ದಾಳಿಗಳನ್ನು ನಡೆಸಿ ಅಮಾಯಕ ಜನರನ್ನು ಕೊಲ್ಲುವುದನ್ನು ನಿಲ್ಲಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮವು ಸಾಮೂಹಿಕ ಆತ್ಮರಕ್ಷಣೆ ತತ್ವವನ್ನು ಆಧರಿಸಿದೆ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿದೆ ಎಂದು ಸ್ಟಾರ್ಮರ್ ಹೇಳಿದ್ದಾರೆ.
ಬಿಬಿಸಿ ವರದಿಯ ಪ್ರಕಾರ, ಗ್ಲೌಸೆಸ್ಟರ್ಶೈರ್ನ ಆರ್ಎಎಫ್ ಫೇರ್ಫೋರ್ಡ್ ಮತ್ತು ಹಿಂದು ಮಹಾಸಾಗರದ ಡಿಗೊ ಗಾರ್ಶಿಯ ನೆಲೆಯನ್ನು ಅಮೆರಿಕ ಬಳಸುವ ಸಾಧ್ಯತೆಯಿದೆ.




