ಕೆನಡಾದಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಖಲಿಸ್ತಾನಿ ಸಂಘಟನೆಯಿಂದ ಬೆದರಿಕೆ

Photo credit: NDTV
ಒಟ್ಟಾವ : ಅಮೆರಿಕ ಮೂಲದ ಖಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (SFJ) ಕೆನಡಾದ ವ್ಯಾಂಕೋವರ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದೆ.
ಸಿಖ್ಸ್ ಫಾರ್ ಜಸ್ಟೀಸ್ ಪ್ರತ್ಯೇಕತಾವಾದಿ ಸಂಘಟನೆ ಸೆಪ್ಟೆಂಬರ್ 18ರ ಗುರುವಾರ ಬೆಳಿಗ್ಗೆ ರಾಯಭಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದೆ. ಭಾರತೀಯರು ಮತ್ತು ಇಂಡೋ-ಕೆನಡಿಯನ್ನರು ರಾಯಭಾರಿ ಕಚೇರಿಯಿಂದ ದೂರವಿರುವಂತೆ ಸೂಚಿಸಿದೆ.
ಇದಲ್ಲದೆ ಹೊಸ ಭಾರತೀಯ ಹೈಕಮಿಷನರ್ ದಿನೀಶ್ ಪಟ್ನಾಯಕ್ ಅವರನ್ನು ಗುರಿಯಾಗಿಸಿಕೊಂಡು ಪೋಸ್ಟರ್ ಅನ್ನು ಕೂಡ ಬಿಡುಗಡೆ ಮಾಡಿದೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಕೆಲವು ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂಬ ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳನ್ನು ಉಲ್ಲೇಖಿಸಿದ SFJ, ಖಲಿಸ್ತಾನಿಗಳ ವಿರುದ್ಧ ಭಾರತೀಯ ರಾಯಭಾರಿ ಕಚೇರಿ ಗೂಢಚಾರ ನಡೆಸುತ್ತಿದೆ ಎಂದು ಆರೋಪಿಸಿದೆ.
Next Story





