ಭಾರತ-ಯುರೋಪಿಯನ್ ಒಕ್ಕೂಟದ ನಡುವಿನ ಒಪ್ಪಂದಕ್ಕೆ ಖಾಲಿಸ್ತಾನಿಗಳ ವಿರೋಧ

ಸಾಂದರ್ಭಿಕ ಚಿತ್ರ | Photo Credit : NDTV
ನ್ಯೂಯಾರ್ಕ್, ಜ.27: ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿರುವ ಖಾಲಿಸ್ತಾನ್ ಗುಂಪುಗಳು `ಬೀಟಿಂಗ್ ರಿಟ್ರೀಟ್' ಮುಂತಾದ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಗುರಿಯಾಗಿಸುವುದಾಗಿ ಬೆದರಿಕೆ ಒಡ್ಡಿದೆ.
ಇದು ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಭಾರತದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ಜನವರಿ 29ರಂದು `ಬೀಟಿಂಗ್ ರಿಟ್ರೀಟ್' ಸಮಾರಂಭ ನಡೆಯುತ್ತದೆ.
ಇದು ಮುಕ್ತ ವ್ಯಾಪಾರ ಒಪ್ಪಂದ(ಎಫ್ಟಿಎ) ಅಲ್ಲ. ಎಫ್ಟಿಟಿಎ ( ಮುಕ್ತ ಬಹುರಾಷ್ಟ್ರೀಯ ಭಯೋತ್ಪಾದನೆ ಒಪ್ಪಂದ) ಆಗಿದೆ. ಪ್ರಸ್ತಾವಿತ ಎಫ್ಟಿಎ ಮೋದಿ ಆಡಳಿತವನ್ನು ಯುರೋಪಿಯನ್ ಯೂನಿಯನ್(ಇಯು) ರಾಷ್ಟ್ರಗಳ ಒಳಗೆ ಹತ್ಯೆಗಳನ್ನು ನಡೆಸಲು ಶಕ್ತಗೊಳಿಸುತ್ತದೆ ಮತ್ತು ಶಸ್ತ್ರಾಸ್ತ್ರಗಳನ್ನು ನೀಡುತ್ತದೆ. ಇಯು ಇಂದು ಮುಕ್ತ ವ್ಯಾಪಾರ ಒಪ್ಪಂದವೆಂದು ಸಂಭ್ರಮಿಸುತ್ತಿರುವುದು ಮುಕ್ತ ಬಹುರಾಷ್ಟ್ರೀಯ ಭಯೋತ್ಪಾದನೆಗೆ ಕಾರಣವಾಗಲಿದೆ' ಎಂದು `ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ)' ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
`ಭಾರತ ಚಿರಾಯುವಾಗಲಿ' ಎಂದು ಟ್ವೀಟ್ ಮಾಡಿರುವ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರಿಗೆ ನೇರವಾಗಿ ಕಳುಹಿಸಿರುವ ಸಂದೇಶದಲ್ಲಿ ಪನ್ನೂನ್ ` ಇಂತಹ ಅನುಮೋದನೆಯು ಸತತ ಭಾರತೀಯ ಆಡಳಿತಗಳು ನಡೆಸಿದ ಸಿಖ್ಖರ ನರಮೇಧವನ್ನು ಮೌನವಾಗಿ ಬೆಂಬಲಿಸಿದಂತಾಗುತ್ತದೆ. ಹೊಣೆಗಾರಿಕೆಯಿಲ್ಲದೆ ಭಾರತೀಯ ರಾಷ್ಟ್ರವನ್ನು ವೈಭವೀಕರಿಸುವ ಮೂಲಕ ಇಯು ಕಮಿಷನ್ ಅಧ್ಯಕ್ಷರು ಸಿಖ್ಖರ ವಿರುದ್ಧದ ಸಾಮೂಹಿಕ ಅಪರಾಧಗಳನ್ನು ಕಾನೂನುಬದ್ಧಗೊಳಿಸುತ್ತಿದ್ದಾರೆ ಮತ್ತು ಯುರೋಪಿಯನ್ ಯೂನಿಯನ್ ಅನ್ನು ನರಮೇಧದ ಅಪರಾಧಿಗಳೊಂದಿಗೆ ಜೋಡಿಸುತ್ತಿದ್ದಾರೆ ಎಂದು ' ಪ್ರತಿಪಾದಿಸಿದ್ದಾನೆ.







