ಲೆಬನಾನ್ ಮೇಲೆ ವೈಮಾನಿಕ ದಾಳಿ ಮುಂದುವರಿಸಿದ ಇಸ್ರೇಲ್

Photo Credit : aljazeera.com
ಬೈರೂತ್, ಮಾ.6: ಉತ್ತರ ಇಸ್ರೇಲ್ನತ್ತ ಹಿಜ್ಬುಲ್ಲಾ ಗುಂಪು ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಬೈರೂತ್ ಹಾಗೂ ದಕ್ಷಿಣ ಲೆಬನಾನ್ನ ಮೇಲೆ ಇಸ್ರೇಲ್ನ ವೈಮಾನಿಕ ದಾಳಿ ಶುಕ್ರವಾರವೂ ಮುಂದುವರಿದಿದ್ದು ಹಲವು ಮನೆಗಳು, ವಸತಿ ಕಟ್ಟಡಗಳು ನೆಲಸಮಗೊಂಡಿರುವುದಾಗಿ ವರದಿಯಾಗಿದೆ.
ಗುರುವಾರ ತಡರಾತ್ರಿಯಿಂದ ಇಸ್ರೇಲ್ ಬೈರೂತ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಜ್ಬುಲ್ಲಾದ ಸುಮಾರು 115 ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ಈ ಮಧ್ಯೆ, ಇಸ್ರೇಲ್ನ ವೈಮಾನಿಕ ದಾಳಿ ಆರಂಭಗೊಂಡ ಬಳಿಕ ಸಾವಿರಾರು ಮಂದಿ ದಕ್ಷಿಣ ಲೆಬನಾನ್ನಿಂದ ಸ್ಥಳಾಂತರಗೊಂಡಿರುವುದಾಗಿ ಲೆಬನಾನ್ನ ಮಾಧ್ಯಮಗಳು ವರದಿ ಮಾಡಿವೆ.
Next Story





