ಲೆಬನಾನ್ | ಇಸ್ರೇಲ್ ದಾಳಿಯಲ್ಲಿ 8 ಮಂದಿ ಮೃತ್ಯು

Photo : PTI
ಬೈರೂತ್, ಮಾ.12: ಮಧ್ಯ ಬೈರೂತ್ನ ಕರಾವಳಿ ಪ್ರದೇಶದ ಮೇಲೆ ಗುರುವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದು, 31 ಮಂದಿ ಗಾಯಗೊಂಡಿರುವುದಾಗಿ ಲೆಬನಾನ್ನ ಆರೋಗ್ಯ ಇಲಾಖೆ ಹೇಳಿದೆ.
ಬೈರುತ್ನ ದಕ್ಷಿಣ ಉಪನಗರಗಳಲ್ಲಿನ ಹಿಜ್ಬುಲ್ಲಾ ನೆಲೆಗಳ ಮೇಲೆ ಪ್ರತ್ಯೇಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
ಮಧ್ಯ ಬೈರೂತ್ನಲ್ಲಿ ಕಾರೊಂದನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದಿದೆ. ದಕ್ಷಿಣ ಲೆಬನಾನ್ನ ಟೈಬೆಹ್ ಮತ್ತು ಅಲ್-ಸುಲ್ತಾನಿಯಾ, ಟೈರ್ ನಗರದ ಬಳಿಯೂ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು ಹಲವು ಕಟ್ಟಡಗಳು ಹಾನಿಗೊಂಡಿವೆ ಎಂದು ಸರಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ(ಎನ್ಎನ್ಎ) ವರದಿ ಮಾಡಿದೆ.
ಈ ಮಧ್ಯೆ, ಟೆಲ್ ಅವೀವ್ನ ಉಪನಗರದಲ್ಲಿರುವ ಇಸ್ರೇಲ್ ಮಿಲಿಟರಿ ಗುಪ್ತಚರ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪಿನ ಮೂಲಗಳು ಗುರುವಾರ ತಿಳಿಸಿವೆ.
Next Story





