ಲೆಬನಾನ್ | ಪುರಾತನ ಕೋಟೆಯನ್ನು ವಶಕ್ಕೆ ಪಡೆದ ಇಸ್ರೇಲ್

Photo Credit : AP
ಬೈರೂತ್, ಮೇ 31: ಲೆಬನಾನ್ನ ಒಳನಾಡು ಪ್ರದೇಶಗಳಲ್ಲಿಯೂ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಇಸ್ರೇಲಿ ಪಡೆಗಳು, ದಕ್ಷಿಣ ಲೆಬನಾನ್ನ ಆಯಕಟ್ಟಿನ ಪರ್ವತವೊಂದರಲ್ಲಿರುವ ಪುರಾತನ ಕೋಟೆಯನ್ನು ಇಸ್ರೇಲಿ ಪಡೆಗಳು ವಶಕ್ಕೆ ತೆಗೆದುಕೊಂಡಿವೆ.
ಅತ್ಯಂತ ದುರ್ಗಮವಾದ ಪ್ರದೇಶದಲ್ಲಿರುವ ಈ ಕೋಟೆಯ ಆಸುಪಾಸಿನಲ್ಲಿರುವ ಗ್ರಾಮಗಳಲ್ಲಿ ಹಿಝ್ಬುಲ್ಲಾ ಹೋರಾಟಗಾರರ ಜೊತೆ ಭೀಕರ ಕಾಳಗ ಹಾಗೂ ವಾಯುದಾಳಿಗಳನ್ನು ನಡೆಸಿ ಕೆಲವು ದಿನಗಳ ಬಳಿಕ ಇಸ್ರೇಲಿ ಪಡೆಗಳು ನಬಾತಿಯೆಹ್ ನಗರದ ಸಮೀಪದಲ್ಲಿರುವ ಆಯಕಟ್ಟಿನ ಬಿಯೂಫೋರ್ಟ್ ಕೋಟೆಯನ್ನು ವಶಕ್ಕೆ ತೆಗೆದುಕೊಂಡಿವೆ.
ಈ ಮಧ್ಯೆ ಇಸ್ರೇಲ್ನ ಆರೇಬಿಕ್ ವಕ್ತಾರ ಅವಿಚಾಯ್ ಆದ್ರಾಯಿ ಅವರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಇಸ್ರೇಲಿ ಪಡೆಗಳು ಕೋಟೆಯ ಹೊರಭಾಗದಲ್ಲಿ ನಡೆದಾಡುತ್ತಿರುವ ದೃಶ್ಯದ ಛಾಯಾಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
2000ನೇ ಇಸವಿಯಲ್ಲಿ ಲೆಬನಾನ್ನಿಂದ ನಿರ್ಗಮಿಸುವವರೆಗೆ ಇಸ್ರೇಲಿ ಪಡೆಗಳು ಸುಮಾರು 18 ವರ್ಷಗಳ ಕಾಲ ವಶದಲ್ಲಿರಿಸಿಕೊಂಡಿದ್ದವು.
Next Story




