ಲಿಬಿಯಾಕ್ಕೆ ಫೆಲೆಸ್ತೀನೀಯರನ್ನು ಸ್ಥಳಾಂತರಿಸಲು ಅಮೆರಿಕ ಯೋಜನೆ: ವರದಿ

PC : NDTV
ವಾಷಿಂಗ್ಟನ್: ಗಾಝಾ ಪಟ್ಟಿಯಿಂದ ಲಿಬಿಯಾಕ್ಕೆ ಸುಮಾರು 1 ದಶಲಕ್ಷ ಫೆಲೆಸ್ತೀನೀಯರನ್ನು ಶಾಶ್ವತವಾಗಿ ಸ್ಥಳಾಂತರಿಸುವ ಯೋಜನೆಯ ಬಗ್ಗೆ ಟ್ರಂಪ್ ಆಡಳಿತ ಕಾರ್ಯ ನಿರ್ವಹಿಸುತ್ತಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಎನ್ಬಿಸಿ ನ್ಯೂಸ್ ವರದಿ ಮಾಡಿದೆ.
ಯೋಜನೆಯನ್ನು ಅಮೆರಿಕ ಆಡಳಿತ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದು ಲಿಬಿಯಾದ ನಾಯಕರ ಜೊತೆ ಚರ್ಚಿಸಿದ್ದಾರೆ. ಫೆಲೆಸ್ತೀನೀಯರನ್ನು ಪುನರ್ವಸತಿಗೊಳಿಸುವುದಕ್ಕೆ ಪ್ರತಿಯಾಗಿ ಸುಮಾರು 10 ವರ್ಷದ ಹಿಂದೆ ಸ್ಥಂಭನೆಗೊಳಿಸಿದ್ದ ಲಿಬಿಯಾದ ಕೋಟ್ಯಾಂತರ ಡಾಲರ್ ನಿಧಿಯನ್ನು ಬಿಡುಗಡೆಗೊಳಿಸಲು ಅಮೆರಿಕ ನಿರ್ಧರಿಸಿದೆ ಎಂದು ವರದಿ ಹೇಳಿದೆ.
ಈ ಮಧ್ಯೆ, ಎಬಿಸಿ ನ್ಯೂಸ್ ವರದಿಯನ್ನು ಟ್ರಿಪೋಲಿಯಾದಲ್ಲಿನ ಅಮೆರಿಕ ರಾಯಭಾರಿ ಕಚೇರಿ ರವಿವಾರ ನಿರಾಕರಿಸಿದೆ.
Next Story





