ಲಾಸ್ ಏಂಜಲೀಸ್ | ತರಬೇತಿ ಕೇಂದ್ರದಲ್ಲಿ ಸ್ಫೋಟ : ಮೂವರು ಮೃತ್ಯು

(ಸಾಂದರ್ಭಿಕ ಚಿತ್ರ) PC | X.com @sammy590045953
ನ್ಯೂಯಾರ್ಕ್: ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಕಾನೂನು ಜಾರಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಹಾಯಕರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಇದು ತರಬೇತಿ ಸಂದರ್ಭದ ಆಕಸ್ಮಿಕ ಘಟನೆಯಾಗಿರುವ ಸಾಧ್ಯತೆಯಿದೆ. ಮೃತಪಟ್ಟವರು `ಅಗ್ನಿದುರಂತ ಮತ್ತು ಸ್ಫೋಟಕ' ಘಟಕದ ಸದಸ್ಯರಾಗಿದ್ದಾರೆ. ಸ್ಫೋಟದ ಬಳಿಕ ಕಾಣಿಸಿಕೊಂಡ ಬೆಂಕಿಯನ್ನು ಸುಮಾರು 4 ಗಂಟೆಗಳ ಕಾರ್ಯಾಚರಣೆಯಲ್ಲಿ ನಿಯಂತ್ರಿಸಲಾಗಿದ್ದು ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಲಾಸ್ ಏಂಜಲೀಸ್ ಮೇಯರ್ ಕರೆನ್ ಬ್ಯಾಸ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Next Story





