ಬಡ್ಡಿದರ ಕಡಿಮೆ ಮಾಡಿ, ಇಲ್ಲದಿದ್ದರೆ ವ್ಯಾಪಾರವನ್ನೇ ನಿಲ್ಲಿಸುತ್ತೇನೆ: ಸೆಂಟ್ರಲ್ ಬ್ಯಾಂಕ್ಗೆ ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಫೆಡರಲ್ ರಿಸರ್ವ್(ಸೆಂಟ್ರಲ್ ಬ್ಯಾಂಕ್) ಬಡ್ಡಿದರಗಳನ್ನು ಕಡಿಮೆ ಮಾಡದಿದ್ದರೆ, ಅಮೆರಿಕವು ವ್ಯಾಪಾರ ಕೊರತೆಯನ್ನು ಎದುರಿಸುತ್ತಿರುವ ದೇಶಗಳೊಂದಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರದಂದು ಬೆದರಿಕೆ ಹಾಕಿದ್ದಾರೆ.
ಅಮೆರಿಕದ ಅರ್ಥವ್ಯವಸ್ಥೆ ಮತ್ತು ಅದರ ಸಾಲದ ಸಾಮರ್ಥ್ಯವು ಬಲಗೊಂಡಿದೆ, ಆದ್ದರಿಂದ ಸಾಲದ ಮೇಲಿನ ಬಡ್ಡಿದರಗಳು ಕಡಿಮೆಯಾಗಬೇಕು ಎಂದು ತಮ್ಮ `ಟ್ರುತ್ ಸೋಶಿಯಲ್' ಪ್ಲಾಟ್ಫಾರ್ಮ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ಟ್ರಂಪ್ ಆಗ್ರಹಿಸಿದ್ದು, ತಮ್ಮ ಈ ವಾದಕ್ಕೆ ಅಗಸ್ಟ್ ತಿಂಗಳ ಪ್ರಬಲ ಉದ್ಯೋಗ ವರದಿಯನ್ನು ಆಧಾರವಾಗಿ ಉಲ್ಲೇಖಿಸಿದ್ದಾರೆ.
"ಬಡ್ಡಿದರವನ್ನು ಕಡಿಮೆ ಮಾಡಿ, ಇಲ್ಲದಿದ್ದರೆ ನಾವು ಯಾರೊಂದಿಗೆ ವ್ಯಾಪಾರ ಕೊರತೆಯನ್ನು ಹೊಂದಿದ್ದೇವೆಯೋ ಆ ದೇಶಗಳೊಂದಿಗೆ ವ್ಯಾಪಾರ ಮಾಡುವುದನ್ನೇ ನಿಲ್ಲಿಸುತ್ತೇವೆ' ಎಂದು ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ.
Next Story




