20 ವರ್ಷ ಹಿಂದಿನ ಅಪಘಾತ ಪ್ರಕರಣ : ಭಾರತದ ಪ್ರಜೆ ಅಮೆರಿಕಾಕ್ಕೆ ಹಸ್ತಾಂತರ

ಗಣೇಶ್ ಶೆಣೈ (Images/NCDA/Unspalsh)
ನ್ಯೂಯಾರ್ಕ್, ಸೆ.30: ಅಮೆರಿಕಾದಲ್ಲಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಭಾರತದ ಪ್ರಜೆ ಗಣೇಶ್ ಶೆಣೈ(54 ವರ್ಷ) ಎಂಬವರನ್ನು ಮುಂಬೈಯಲ್ಲಿ ಬಂಧಿಸಿ ಅಮೆರಿಕಾಕ್ಕೆ ಹಸ್ತಾಂತರಿಸಿರುವುದಾಗಿ ವರದಿಯಾಗಿದೆ.
2005ರ ಎಪ್ರಿಲ್ 5ರಂದು ನ್ಯೂಯಾರ್ಕ್ ನಗರದ ಹೊರವಲಯದ ಹಿಕ್ಸ್ವಿಲ್ಲೆ ಎಂಬಲ್ಲಿ ಶೆಣೈ ಅತೀ ವೇಗದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಾಗ ಕಾರಿನಲ್ಲಿದ್ದ ಫಿಲಿಪ್ ಮಾಸ್ಟ್ರೋಪೊಲೊ ಎಂಬ ವ್ಯಕ್ತಿ ಮೃತಪಟ್ಟಿದ್ದ. ಬಳಿಕ ಕಾನೂನು ಕ್ರಮಗಳಿಂದ ತಪ್ಪಿಸಿಕೊಂಡಿದ್ದ ಶೆಣೈ ಭಾರತಕ್ಕೆ ಪರಾರಿಯಾಗಿದ್ದರು. ಆದರೆ ಕಳೆದ ವಾರ ಮುಂಬೈಯಲ್ಲಿ ಬಂಧಿಸಿದ ಬಳಿಕ ಅಮೆರಿಕಾದ ನಸಾವು ಕೌಂಟಿಯ ನ್ಯಾಯಾಧಿಕಾರಿಯ ಕಚೇರಿಗೆ ಹಸ್ತಾಂತರಿಸಲಾಗಿದ್ದು ಜಾಮೀನು ರಹಿತ ಬಂಧನ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





