ಮೆಕ್ಸಿಕೋ ಅಧ್ಯಕ್ಷೆಯನ್ನು ಚುಂಬಿಸಲು ಯತ್ನಿಸಿದ ವ್ಯಕ್ತಿ: ವೀಡಿಯೊ ವೈರಲ್

ಮೆಕ್ಸಿಕೋ ಸಿಟಿ, ನ.5: ಮೆಕ್ಸಿಕೋ ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೆಕ್ಸಿಕೋದ ಅಧ್ಯಕ್ಷೆ ಕ್ಲಾಡಿಯಾ ಶೀನ್ಬಾಮ್ ಅವರನ್ನು ವ್ಯಕ್ತಿಯೊಬ್ಬ ತಬ್ಬಿಕೊಳ್ಳಲು ಮತ್ತು ಚುಂಬಿಸಲು ಪ್ರಯತ್ನಿಸಿದ ಘಟನೆ ಮಂಗಳವಾರ ವರದಿಯಾಗಿದ್ದು ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೆಕ್ಸಿಕೋ ನಗರದಲ್ಲಿ ಅಧ್ಯಕ್ಷೆ ಬೆಂಬಲಿಗರು ಮತ್ತು ಸ್ಥಳೀಯರನ್ನು ಭೇಟಿಯಾಗಿ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಅವರ ಭುಜದ ಮೇಲೆ ಕೈ ಇರಿಸಿ ಅವರನ್ನು ತಬ್ಬಿಕೊಂಡು ಚುಂಬಿಸಲು ಪ್ರಯತ್ನಿಸಿದ್ದಾನೆ. ಆಗ ಅಧ್ಯಕ್ಷೆ ಪ್ರಸಂಗಾವಧಾನತೆ ತೋರಿ ಆ ವ್ಯಕ್ತಿಯಿಂದ ದೂರ ಸರಿಯಲು ಪ್ರಯತ್ನಿಸಿದ್ದು ಅವರ ಭದ್ರತಾ ತಂಡ ಆತನನ್ನು ಪಕ್ಕಕ್ಕೆ ಎಳೆದಿದೆ. ಈ ವೀಡಿಯೊ ವೈರಲ್ ಆಗಿದ್ದು ಅಧ್ಯಕ್ಷರ ಭದ್ರತಾ ಲೋಪದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Next Story





