ವಿಮಾನದ ಇಂಜಿನ್ಗೆ ಬಿದ್ದ ವ್ಯಕ್ತಿ ಸಾವು
PC : NDTV
ಆಮ್ಸ್ಟರ್ಡಾಂ : ನೆದರ್ಲ್ಯಾಂಡ್ನ ರಾಜಧಾನಿ ಆಮ್ಸ್ಟರ್ಡಾಂನ ಶಿಫೋಲ್ ವಿಮಾನ ನಿಲ್ದಾಣದಲ್ಲಿ ಟೇಕ್ಆಫ್ಗೆ ಸಿದ್ಧವಾಗಿದ್ದ ವಿಮಾನದ ಇಂಜಿನ್ನೊಳಗೆ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ವಿಮಾನವು ಡೆನ್ಮಾರ್ಕ್ನ ಬಿಲುಂಡ್ಗೆ ಪ್ರಯಾಣಿಸಲು ಸಿದ್ಧಗೊಂಡಿದ್ದಾಗ ವಿಮಾನದ ರೆಕ್ಕೆಯ ಮೇಲೆ ಓಡಿಬಂದ ವ್ಯಕ್ತಿಯೊಬ್ಬ ಕಾಲುಜಾರಿ ಇಂಜಿನ್ನ ಒಳಗಿರುವ ಕೂಲಿಂಗ್ ಫ್ಯಾನ್ನ ರೆಕ್ಕೆಗಳಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಇದು ಆಕಸ್ಮಿಕ ಅಪಘಾತವೇ ಅಥವಾ ಆತ್ಮಹತ್ಯೆ ಪ್ರಕರಣವೇ ಎಂಬುದು ಸ್ಪಷ್ಟವಾಗಿಲ್ಲ. ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
Next Story